: ಗ್ರಾಮ ಸರ್ ಪಂಚ್ ಭ್ರಷ್ಟಾಚಾರ; ಜಿಲ್ಲಾಧಿಕಾರಿ ಕಚೇರಿಗೆ ದಾಖಲೆಗಳ ಮಾಲೆಯೊಂದಿಗೆ ಉರುಳಿಕೊಂಡು ಬಂದ ವ್ಯಕ್ತಿ! ಜುಲೈ ನಂತರ ಈ ರೀತಿ ಮಧ್ಯ ಪ್ರದೇಶದಲ್ಲಿ ನಡೆಯುತ್ತಿರುವ ಎರಡನೇ ಪ್ರತಿಭಟನೆಯಾಗಿದೆ. ನೀಮಚ್ ಜಿಲ್ಲಾಧಿಕಾರಿ ಹಿಮಾಂಶು ಚಂದ್ರ ಆ ವ್ಯಕ್ತಿಯ ದೂರಿನ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ನೀಮಚ್ (ಮಧ್ಯ ಪ್ರದೇಶ): ಭ್ರಷ್ಟಾಚಾರ ಆರೋಪದಡಿ ಗ್ರಾಮದ ಸರಪಂಚ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಧ್ಯಪ್ರದೇಶದ ನೀಮಚ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ವ್ಯಕ್ತಿಯೊಬ್ಬರು ದಾಖಲೆಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಂಡು ರಸ್ತೆಯಲ್ಲಿ ಉರುಳಾಡಿಕೊಂಡು ಬಂದ ಘಟನೆ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಜುಲೈ ನಂತರ ಈ ರೀತಿ ಮಧ್ಯ ಪ್ರದೇಶದಲ್ಲಿ ನಡೆಯುತ್ತಿರುವ ಎರಡನೇ ಪ್ರತಿಭಟನೆಯಾಗಿದೆ. ನೀಮಚ್ ಜಿಲ್ಲಾಧಿಕಾರಿ ಹಿಮಾಂಶು ಚಂದ್ರ ಆ ವ್ಯಕ್ತಿಯ ದೂರಿನ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.नीमच में जनसुनवाई में रेंगते हुए पहुंचने वाला ये शख्स अपने साथ शिकायतों और सुबूतों के कागजों के ढेर को घसीटता हुआ @DrMohanYadav51 सरकार की लाचारी दर्शा रहा है। इनका नाम मुकेश प्रजापति है जो न्याय की गुहार लगाने कलेक्टर कार्यालय पहुँचे है। ../6Tmzpug5c9ಮುಖೇಶ್ ಪ್ರಜಾಪತ್ ಎಂದು ಗುರುತಿಸಲಾದ ಪ್ರತಿಭಟನಾಕಾರನಾಗಿದ್ದು, ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಕ್ಲಿಪ್ ನ್ನು ಹಂಚಿಕೊಂಡಿದೆ.ವಿಡಿಯೊದಲ್ಲಿ, ಪ್ರಜಾಪತ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗಿನ ರಸ್ತೆಯ ಮೇಲೆ ಹಾರದಂತೆ ಕಾಗದದ ಸರಮಾಲೆಯೊಂದಿಗೆ ಉರುಳಾಡಿಕೊಂಡು ಬರುತ್ತಿದ್ದಾರೆ. ಇದು ಅವರ ಸ್ವಗ್ರಾಮ ಕಂಕರಿಯಾದ ಸರಪಂಚ್ ವಿರುದ್ಧ ಭ್ರಷ್ಟಾಚಾರದ ದೂರು ಎಂದು ಅವರು ಹೇಳಿದ್ದಾರೆ.@ @ @ @ @BJP4MP @ ಭ್ರಷ್ಟಾಚಾರ ಆರೋಪದಡಿ ಗ್ರಾಮದ ಸರಪಂಚ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಧ್ಯಪ್ರದೇಶದ ನೀಮಚ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ವ್ಯಕ್ತಿಯೊಬ್ಬರು ದಾಖಲೆಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಂಡು ರಸ್ತೆಯಲ್ಲಿ ಉರುಳಾಡಿಕೊಂಡು ಬಂದ ಘಟನೆ… ../plQRv93yZ5ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜಾಪತ್, ಕಳೆದ ಆರೇಳು ವರ್ಷಗಳಿಂದ ತಮ್ಮ ಕುಂದುಕೊರತೆಗಳನ್ನು ಎತ್ತಿ ತೋರಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ () ಮಮತಾ ಖೇಡೆ ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಹೊಸ ತನಿಖೆ ನಡೆಸಲಾಗುವುದು ಎಂದು ಹೇಳಿದರು.ಕಳೆದ ಜುಲೈನಲ್ಲಿ, ಮಂಡಸೌರ್ ಜಿಲ್ಲೆಯ ವಯೋವೃದ್ಧ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿಯ ನೆಲದ ಮೇಲೆ ಉರುಳಾಡಿಕೊಂಡು ತನ್ನ ಭೂಹಗರಣದ ಕುಂದುಕೊರತೆಯನ್ನು ಪರಿಹರಿಸಲಿಲ್ಲ ಎಂದು ಆರೋಪಿಸಿದ್ದರು.