15 ನಿಮಿಷಗಳಲ್ಲಿ ವಾಪಸ್ ಕೊಡುತ್ತೇವೆ: ನಕಲಿ ಸಿಬಿಐ ಗ್ಯಾಂಗ್ ನಿಂದ ಖಾತೆಗೆ 85 ಲಕ್ಷ ರೂ. ವಂಚನೆ! ನಕಲಿ ಸಿಬಿಐ ಗ್ಯಾಂಗ್ ನ ಜಾಲವೊಂದು ಬಹುರಾಷ್ಟ್ರೀಯ ಸಂಸ್ಥೆಯೊಂದರ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ 85 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದಿದೆ. ನವದೆಹಲಿ: 15 ನಿಮಿಷಗಳಲ್ಲಿ ಹಣವನ್ನು ವಾಪಸ್ ನೀಡುವುದಾಗಿ ಹೇಳಿ ನಕಲಿ ಸಿಬಿಐ ಗ್ಯಾಂಗ್ ನ ಜಾಲವೊಂದು ಬಹುರಾಷ್ಟ್ರೀಯ ಸಂಸ್ಥೆಯೊಂದರ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ 85 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದಿದೆ.ಸಿಬಿಐ, ಕಸ್ಟಮ್ಸ್, ನಾರ್ಕೊಟಿಕ್ಸ್ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಈ ಕೃತ್ಯ ಎಸಗಿದ್ದಾರೆ.ಈ ನಕಲಿ ಅಧಿಕಾರಿಗಳ ಗ್ಯಾಂಗ್ ಚೆಕ್ ಮೂಲಕ ಹಣ ಪಡೆದು, ಅದನ್ನು ರಾಣ ಗಾರ್ಮೆಂಟ್ಸ್ ಎಂಬ ಕಂಪನಿಗೆ ವರ್ಗಾವಣೆ ಮಾಡಿದ್ದಾರೆ. ಈ ಕಂಪನಿಯ ಖಾತೆ ದೆಹಲಿಯ ಉತ್ತಮ್ ನಗರದಲ್ಲಿನ ಹೆಚ್ ಡಿಎಫ್ ಸಿ ಖಾತೆಯಾಗಿತ್ತು ಎಂದು ತಿಳಿದುಬಂದಿದೆ. ಪ್ರಕಾರ, ರಾಣ ಗಾರ್ಮೆಂಟ್ಸ್ ನ ಹೆಚ್ ಡಿಎಫ್ ಸಿ ಖಾತೆಯಿಂದ ಹಣವನ್ನು ಭಾರತದಾದ್ಯಂತ 105 ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ವಂಚನೆ ಕುರಿತು ಉತ್ತಮ್ ನಗರ್ ಶಾಖೆ ಸಹ, ಪೊಲೀಸ್ ದೂರು ದಾಖಲಿಸಿದೆ ಎಂದು ನಿವೃತ್ತ ಅಧಿಕಾರಿ ಹೇಳಿದ್ದಾರೆ."ನನಗೆ ಮೂರು ವರ್ಷಗಳ ಸೇವಾ ಅವಧಿ ಉಳಿದಿತ್ತು. ಆದರೆ ನನ್ನ ಮಗನನ್ನು ಕಾಲೇಜಿಗೆ ಕಳುಹಿಸಲು ನನಗೆ ಸಮಯ ಬೇಕಾಗಿದ್ದರಿಂದ ಸ್ವಯಂ ನಿವೃತ್ತಿ ತೆಗೆದುಕೊಂಡೆ. ನನಗೆ ಮೇ 2 ರಂದು ನಿವೃತ್ತಿ ಪರಿಹಾರ ಸಿಕ್ಕಿತು. ನನ್ನ ಮಗನ ವೀಸಾ ಸಂಬಂಧಿತ ಪ್ರಕ್ರಿಯೆ ಮೇ 17 ರಂದು ನಡೆಯಬೇಕಿತ್ತು. ಆದರೆ ಮೇ 14 ರಂದು, ನನ್ನ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಣ ಹಿಂದಿರುಗಿಸುವುದಾಗಿ ಹೇಳಿ ₹ 85 ಲಕ್ಷವನ್ನು ಕಳುಹಿಸುವಂತೆ ಗ್ಯಾಂಗ್ ನನ್ನನ್ನು ವಂಚಿಸಿದೆ, ”ಎಂದು ಭಾರತದಲ್ಲಿ ವ್ಯಾಪಕ ಕಾರ್ಯಾಚರಣೆಗಳನ್ನು ಹೊಂದಿರುವ ಜರ್ಮನಿಯ ಪ್ರಧಾನ ಕಚೇರಿಯ ಸಂಸ್ಥೆಯೊಂದರ 57 ವರ್ಷದ ನಿವೃತ್ತ ಅಸೋಸಿಯೇಟ್ ಜನರಲ್ ಮ್ಯಾನೇಜರ್ ಹೇಳಿದ್ದಾರೆ.ವಿಶಾಖಪಟ್ಟಣಂ ಕ್ರೈಂ ಬ್ರಾಂಚ್ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಕೆಲವು ಸುಳಿವುಗಳು ಸಿಕ್ಕಿವೆ ಎಂದು ಕರಾವಳಿ ನಗರ ಪೊಲೀಸ್ ಮೂಲಗಳು ತಿಳಿಸಿವೆ.ವಿಶಾಖಪಟ್ಟಣಂನಲ್ಲಿರುವ ಬ್ಯಾಂಕ್‌ನಲ್ಲಿ ಕೆಲವು ಒಳಗಿನವರು ಭಾಗಿಯಾಗಿರಬಹುದು ಎಂದು ನಿವೃತ್ತ ಅಧಿಕಾರಿ ಆರೋಪಿಸಿದ್ದಾರೆ, ಗ್ಯಾಂಗ್‌ಗೆ ನಿವೃತ್ತಿಯ ನಂತರ ಅವರು ಪಡೆದ ನಿಖರವಾದ ಮೊತ್ತ ಸೇರಿದಂತೆ ಅವರ ಖಾತೆಯ ಬಗ್ಗೆ ಎಲ್ಲವೂ ತಿಳಿದಿತ್ತು. "ಹತ್ತಿರದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೋಗಿ ಚೆಕ್ ಡ್ರಾಪ್ ಮಾಡಲು ಗ್ಯಾಂಗ್ ಹೇಳಿತು" ಎಂದು ಸಂತ್ರಸ್ತ ವ್ಯಕ್ತಿ ತಿಳಿಸಿದ್ದಾರೆ.