ಅಭ್ಯರ್ಥಿಗಳು ಜಾತಿ ಸಮೀಕರಣ ಅನುಸರಿಸಿದರೆ ಗೆಲ್ಲುವುದಿಲ್ಲ: ಗುಜರಾತ್ ಕಾಂಗ್ರೆಸ್ ಸಂಸದೆ ಗನಿಬೆನ್ ಠಾಕೂರ್ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ನಾಯಕಿ ಗನಿಬೆನ್ ಠಾಕೂರ್ ಅವರು ಗುಜರಾತ್‌ನಲ್ಲಿ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದಾರೆ. ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ನಾಯಕಿ ಗನಿಬೆನ್ ಠಾಕೂರ್ ಅವರು ಗುಜರಾತ್‌ನಲ್ಲಿ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದಾರೆ.ಇತ್ತೀಚೆಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಕಾಂಗ್ರೆಸ್ ಸಂಸದೆ, ತಮ್ಮ ಪಕ್ಷದ ನೀತಿಗಳ ಬಗ್ಗೆ ವಿಶೇಷವಾಗಿ ಜಾತಿ ಸಮೀಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು."ಅಭ್ಯರ್ಥಿಯು ತಮ್ಮ ಜಾತಿಯ ಬಲವನ್ನು ಅವಲಂಬಿಸುವುದು ದುರದೃಷ್ಟಕರ" ಎಂದು ಗನಿಬೆನ್ ಹೇಳಿದ್ದಾರೆ. ಪಕ್ಷದ ಸಂಘಟನೆಯ ಸಕ್ರಿಯ ಬೆಂಬಲವಿಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ."ಕಾಂಗ್ರೆಸ್ ವ್ಯವಸ್ಥೆಗೆ ಗಮನಾರ್ಹ ಸುಧಾರಣೆಗಳ ಅಗತ್ಯವಿದೆ. ಸಮುದಾಯ ಆಧಾರಿತ ಬೆಂಬಲವನ್ನು ಅವಲಂಬಿಸುವ ಬದಲು, ಪಕ್ಷವು ತನ್ನ ಶಕ್ತಿಯ ಮೇಲೆ ನಿಲ್ಲಬೇಕು ಎಂದು ಎಂದು ಒತ್ತಿ ಹೇಳಿದ್ದಾರೆ.ಬನಸ್ಕಾಂತದಲ್ಲಿ ಈ ಉಪಕ್ರಮವು ಪ್ರಾರಂಭವಾಗಿದೆ. ಪಕ್ಷದ ವಿರುದ್ಧ ಕೆಲಸ ಮಾಡುವವರನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಅವರನ್ನು ಶಿಕ್ಷಿಸಬೇಕು. ಅಂತಹ ವ್ಯಕ್ತಿಗಳಿಗೆ ಶಿಕ್ಷೆ ನೀಡದಿದ್ದರೆ, ಅವರು ಇತರರಿಗೆ ಸ್ಫೂರ್ತಿ ನೀಡುತ್ತಾರೆ ಮತ್ತು ಅಂತಿಮವಾಗಿ ಕಾಂಗ್ರೆಸ್ ಹಾನಿ ಮಾಡುತ್ತಾರೆ ಎಂದು ಠಾಕೂರ್ ತಿಳಿಸಿದ್ದಾರೆ.