ಅನಂತ್ ಅಂಬಾನಿ ಮದುವೆಗೆ ಬಾಂಬ್ ಬೆದರಿಕೆ: ಗುಜರಾತ್ ಮೂಲದ ಇಂಜಿನಿಯರ್ ಬಂಧನ ಬಂಧಿತ ಆರೋಪಿಯನ್ನು ವಡೋದರ ನಿವಾಸಿ ವಿರಾಲ್ ಶಾ ಎಂದು ಗುರುತಿಸಲಾಗಿದೆ. ಗುಜರಾತ್‌ನಲ್ಲಿರುವ ವಿರಾಲ್ ಶಾ ನಿವಾಸದಿಂದ ಮುಂಬೈ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಇಂದು ಬೆಳಿಗ್ಗೆ ಅವರನ್ನು ಬಂಧಿಸಿದ್ದಾರೆ. ನವದೆಹಲಿ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಬಾಂಬ್ ಬೆದರಿಕೆ ಹಾಕಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ 32 ವರ್ಷದ ಎಂಜಿನಿಯರ್ ಅನ್ನು ಬಂಧಿಸಿದ್ದಾರೆ. ವ್ಯಾಪಕ ಕಳವಳವನ್ನು ಉಂಟುಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಸಂಪೂರ್ಣ ತನಿಖೆಯ ನಂತರ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.ಬಂಧಿತ ಆರೋಪಿಯನ್ನು ವಡೋದರ ನಿವಾಸಿ ವಿರಾಲ್ ಶಾ ಎಂದು ಗುರುತಿಸಲಾಗಿದೆ. ಗುಜರಾತ್‌ನಲ್ಲಿರುವ ವಿರಾಲ್ ಶಾ ನಿವಾಸದಿಂದ ಮುಂಬೈ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಇಂದು ಬೆಳಿಗ್ಗೆ ಅವರನ್ನು ಬಂಧಿಸಿದ್ದಾರೆ.ಪೋಸ್ಟ್ ನಂತರ ಪೊಲೀಸರು ಮದುವೆ ಕಾರ್ಯಕ್ರಮದ ಭದ್ರತೆಯನ್ನು ಹೆಚ್ಚಿಸಿದರು. ಸಂಭಾವ್ಯ ಬೆದರಿಕೆಯ ಕುರಿತು ಪೊಲೀಸರು ತನಿಖೆಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12 ರಂದು ನಡೆದ ಮದುವೆ ಸಮಾರಂಭದಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಫಾರ್ಮಾ ಉದ್ಯಮಿಗಳಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾದರು.ಮೆಗಾ ಈವೆಂಟ್‌ನಲ್ಲಿ ಪ್ರಧಾನಿ ಮೋದಿ, ವಿದೇಶಿ ಹಾಗೂ ದೇಶಿ ಸೆಲೆಬ್ರಿಟಿಗಳು, ರಾಜಕಾರಣಿಗಳು, ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾ ಗಣ್ಯರು ಮತ್ತು ದೇಶದ ಬಹುತೇಕ ಎಲ್ಲಾ ಅಗ್ರ ಕ್ರಿಕೆಟಿಗರು ಭಾಗವಹಿಸಿದ್ದರು.