ಆಂಧ್ರ ಪ್ರದೇಶ: ನಿರ್ಮಾಣ ಹಂತದ ಕೇಂದ್ರ ಕಚೇರಿ ಧ್ವಂಸ; ಜಗನ್ ಕಿಡಿ ಧ್ವಂಸವು ನಾಯ್ಡು ಅವರ ಮುಂದಿನ ಐದು ವರ್ಷಗಳ ಆಳ್ವಿಕೆಯನ್ನು ಸೂಚಿಸುತ್ತದೆ. ಈ ಸೇಡಿನ ರಾಜಕಾರಣಕ್ಕೆ ವಿರೋಧ ಪಕ್ಷ ಬೆದರುವುದಿಲ್ಲ. ಪಕ್ಷ ಜನರಿಗಾಗಿ ಹೋರಾಟ ನಡೆಸಲಿದೆ ಎಂದು ಜಗನ್ ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ. ಅಮರಾವತಿ: ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ರಾಜ್ಯ ಸರ್ಕಾರ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿರೋಧ ಪಕ್ಷದ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಿದೆ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಶನಿವಾರ ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ನೆಲಸಮಗೊಳಿಸಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಫೋಸ್ಟ್ ಮಾಡಿದ್ದು, ಚಂದ್ರಬಾಬು ನಾಯ್ಡು ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಬಹುತೇಕ ಪೂರ್ಣಗೊಂಡಿದ್ದ ವೈಎಸ್ ಆರ್ ಸಿಪಿ ಕೇಂದ್ರ ಕಚೇರಿಯನ್ನು ಸರ್ವಾಧಿಕಾರಿಯಂತೆ ಯಂತ್ರಗಳು ಮತ್ತು ಬುಲ್ಡೋಜರ್‌ಗಳಿಂದ ವೈಎಸ್‌ಆರ್‌ಸಿಪಿಯ ಕೇಂದ್ರ ಕಚೇರಿಯನ್ನು ಕೆಡವಿದ್ದಾರೆ ಎಂದು ಕಿಡಿಕಾರಿದ್ದಾರೆ.ఆంధ్రప్రదేశ్‌లో రాజకీయ కక్షసాధింపు చర్యలకు దిగిన చంద్రబాబు తన దమనకాండను మరోస్థాయికి తీసుకెళ్లారు. ఒక నియంతలా తాడేపల్లిలో దాదాపు పూర్తికావొచ్చిన @ కేంద్ర కార్యాలయాన్ని బుల్డోజర్లతో కూల్చివేయించారు. హైకోర్టు ఆదేశాలనూ బేఖాతరు చేశారు. రాష్ట్రంలో చట్టం, న్యాయం పూర్తిగా…ಶನಿವಾರ ಮುಂಜಾನೆ 5.30ರ ಸುಮಾರಿಗೆ ಧ್ವಂಸ ಕಾರ್ಯಾಚರಣೆ ಪ್ರಾರಂಭವಾಗಿದೆ. "ಸಿಆರ್‌ಡಿಎ (ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ) ದ ಕ್ರಮಗಳನ್ನು ಪ್ರಶ್ನಿಸಿ ವೈಎಸ್‌ಆರ್‌ಸಿಪಿ ಶುಕ್ರವಾರ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಯಾವುದೇ ಧ್ವಂಸ ಕಾರ್ಯಾಚರಣೆ ನಡೆಯದಂತೆ ಕೋರ್ಟ್ ಆದೇಶ ನೀಡಿತ್ತು. ಆದರೆ, ಪ್ರಾಧಿಕಾರ ಹಿಂದೆ ಸರಿದಿದ್ದು, ಕಟ್ಟಡವನ್ನು ಧ್ವಂಸಗೊಳಿಸಿದೆ ಎಂದು ವೈಎಸ್ ಆರ್ ಸಿಪಿ ಹೇಳಿದೆ.ಸಿಆರ್‌ಡಿಎ ಕ್ರಮವು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ. ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಒಳಗೊಂಡಿರುವ ಎನ್‌ಡಿಎ ಸರ್ಕಾರದ ಅಡಿಯಲ್ಲಿ ದಕ್ಷಿಣ ರಾಜ್ಯದಲ್ಲಿ ಕಾನೂನು ಮತ್ತು ನ್ಯಾಯ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಧ್ವಂಸವು ನಾಯ್ಡು ಅವರ ಮುಂದಿನ ಐದು ವರ್ಷಗಳ ಆಳ್ವಿಕೆಯನ್ನು ಸೂಚಿಸುತ್ತದೆ. ಈ ಸೇಡಿನ ರಾಜಕಾರಣಕ್ಕೆ ವಿರೋಧ ಪಕ್ಷ ಬೆದರುವುದಿಲ್ಲ. ಪಕ್ಷ ಜನರಿಗಾಗಿ ಹೋರಾಟ ನಡೆಸಲಿದೆ ಎಂದು ಜಗನ್ ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ.