ಬಿಹಾರ: ಶಾಲೆಗೆ ಗನ್ ತೆಗೆದುಕೊಂಡು ಬಂದು ಮತ್ತೊಬ್ಬ ವಿದ್ಯಾರ್ಥಿಗೆ ಗುಂಡು ಹಾರಿಸಿದ 5 ವರ್ಷದ ಬಾಲಕ! ನರ್ಸರಿ ವಿದ್ಯಾರ್ಥಿಯಾಗಿದ್ದ ಬಾಲಕ ತನ್ನ ಬ್ಯಾಗ್‌ನಲ್ಲಿ ಬಂದೂಕನ್ನು ಬಚ್ಚಿಟ್ಟುಕೊಂಡು ಶಾಲೆಗೆ ಆಗಮಿಸಿದ ಆಘಾತಕಾರಿ ಘಟನೆ ಉತ್ತರ ಬಿಹಾರ ಜಿಲ್ಲೆಯ ಸುಪೌಲ್‌ನಲ್ಲಿ ನಡೆದಿದೆ. ಸುಪೌಲ್: ಬಿಹಾರದಲ್ಲಿ ಐದು ವರ್ಷದ ಬಾಲಕನೊಬ್ಬ ಬುಧವಾರ ಶಾಲೆಗೆ ಬಂದೂಕು ಹಿಡಿದುಕೊಂಡು ಬಂದಿದ್ದು, ಮತ್ತೊಂದು ಮಗುವಿನ ಮೇಲೆ ಗುಂಡು ಹಾರಿಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ನರ್ಸರಿ ವಿದ್ಯಾರ್ಥಿಯಾಗಿದ್ದ ಬಾಲಕ ತನ್ನ ಬ್ಯಾಗ್‌ನಲ್ಲಿ ಬಂದೂಕನ್ನು ಬಚ್ಚಿಟ್ಟುಕೊಂಡು ಶಾಲೆಗೆ ಆಗಮಿಸಿದ ಆಘಾತಕಾರಿ ಘಟನೆ ಉತ್ತರ ಬಿಹಾರ ಜಿಲ್ಲೆಯ ಸುಪೌಲ್‌ನಲ್ಲಿ ನಡೆದಿದೆ."ನರ್ಸರಿ ವಿದ್ಯಾರ್ಥಿ ಅದೇ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಬಾಲಕನ ಮೇಲೆ ಗುಂಡು ಹಾರಿಸಿದ್ದಾನೆ. ಬುಲೆಟ್ ಅವನ ತೋಳಿಗೆ ತಗುಲಿದೆ." "ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಶವ್ ಯಾದವ್ ಅವರು ತಿಳಿಸಿದ್ದಾರೆ.5 ವರ್ಷದ ಬಾಲಕ ಬಂದೂಕಿಗೆ ಹೇಗೆ ಕೈ ಹಾಕಿದನು ಮತ್ತು ಅದನ್ನು ಲಾಲಪಟ್ಟಿ ಪ್ರದೇಶದಲ್ಲಿರುವ ಖಾಸಗಿ ಶಾಲೆಗೆ ಕೊಂಡೊಯ್ಯಲು ಹೇಗೆ ಸಾಧ್ಯವಾಯಿತು ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಯಾದವ್ ಹೇಳಿದ್ದಾರೆ."ನಾವು ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ನಿಯಮಿತವಾಗಿ ಪರಿಶೀಲಿಸುವಂತೆ ಜಿಲ್ಲೆಯಾದ್ಯಂತ ಶಾಲೆಗಳಿಗೆ ಸೂಚಿಸುತ್ತಿದ್ದೇವೆ. ಈ ಘಟನೆಯು ಪೋಷಕರು ಮತ್ತು ಶಿಕ್ಷಕರಲ್ಲಿ ಹೆಚ್ಚಿನ ಆತಂಕವನ್ನು ಉಂಟುಮಾಡಿದೆ" ಎಂದು ಎಸ್ಪಿ ತಿಳಿಸಿದ್ದಾರೆ.