: 29 ಲಕ್ಷ ರೂ ರಿವಾರ್ಡ್ ಹೊಂದಿದ್ದ 25 ನಕ್ಸಲರ ಶರಣಾಗತಿ! ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 25 ಮಾವೋವಾದಿಗಳು ಶರಣಾಗಿದ್ದು, ಅವರು ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಆರ್‌ಪಿಎಫ್‌ನ ಡಿಐಜಿ ಎದುರು ಶರಣಾಗಿದ್ದಾರೆ. ಬಿಜಾಪುರ: 29 ಲಕ್ಷ ರೂ ರಿವಾರ್ಡ್ ಹೊಂದಿದ್ದ 25 ನಕ್ಸಲರು ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಮಂಗಳವಾರ ಶರಣಾಗಿದ್ದಾರೆ.ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 25 ಮಾವೋವಾದಿಗಳು ಶರಣಾಗಿದ್ದು, ಅವರು ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಆರ್‌ಪಿಎಫ್‌ನ ಡಿಐಜಿ ಎದುರು ಶರಣಾಗಿದ್ದಾರೆ. ಈ ಮಾವೋವಾದಿಗಳಿಗೆ ಒಟ್ಟು 29 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.ಈ ಪೈಕಿ ಮೂವರು ಮಾವೋವಾದಿಗಳಿಗೆ ತಲಾ 8 ಲಕ್ಷ ರೂಪಾಯಿ, ಒಬ್ಬ ಮಾವೋವಾದಿಗೆ 3 ಲಕ್ಷ ರೂಪಾಯಿ ಮತ್ತು ಇತರ ಇಬ್ಬರು ಮಾವೋವಾದಿಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.#: 25 . 29 . ../Dolhhrh2ZGಶರಣಾದ ಮಾವೋವಾದಿಗಳಿಗೆ ಛತ್ತೀಸ್‌ಗಢ ಸರ್ಕಾರದ ಪುನರ್ವಸತಿ ನೀತಿಯಡಿ ತಲಾ 25,000 ರೂಪಾಯಿಗಳನ್ನು ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.ಮಾವೋವಾದಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಆರ್‌ಪಿಎಫ್‌ನ ಡಿಐಜಿ ಎದುರು ಶರಣಾಗಿದ್ದಾರೆ.