ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ, 15 ದಿನಗಳಲ್ಲಿ ಹತ್ತನೇ ಘಟನೆ 15 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆಯೊಂದು ಇಂದು ಬೆಳಗ್ಗೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪಾಟ್ನಾ: ಬಿಹಾರದಲ್ಲಿ ಗುರುವಾರ ಮತ್ತೊಂದು ಸೇತುವೆ ಕುಸಿದು ಬಿದ್ದಿದ್ದು, ಕೇವಲ ಹದಿನೈದು ದಿನಗಳಲ್ಲಿ ರಾಜ್ಯದಲ್ಲಿ 10 ಸೇತುವೆಗಳು ಕುಸಿದು ಬಿದ್ದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕಳೆದ 24 ಗಂಟೆಗಳಲ್ಲಿ ಮತ್ತೆರಡು ಸೇತುವೆ ಕುಸಿತಕ್ಕೆ ಸಾಕ್ಷಿಯಾದ ಸರನ್‌ನಿಂದ ವರದಿಯಾದ ಇತ್ತೀಚಿನ ಘಟನೆ ಇದಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ಅವರು ಹೇಳಿದ್ದಾರೆ.15 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆಯೊಂದು ಇಂದು ಬೆಳಗ್ಗೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.ಬನೇಯಪುರ ಬ್ಲಾಕ್‌ನಲ್ಲಿದ್ದ ಗಂಡಕಿ ನದಿಯ ಮೇಲಿನ ಸಣ್ಣ ಸೇತುವೆ ಇಂದು ಕುಸಿದು ಬಿದ್ದಿದ್ದು, ಈ ಸೇತುವೆ ಸರನ್‌ನ ಹಲವಾರು ಹಳ್ಳಿಗಳನ್ನು ನೆರೆಯ ಸಿವಾನ್ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತಿತ್ತು."ಈ ಸಣ್ಣ ಸೇತುವೆಯನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ನಾನು ಸ್ಥಳಕ್ಕೆ ಹೋಗುತ್ತಿದ್ದೇನೆ. ಈಗಾಗಲೇ ಜಿಲ್ಲಾಡಳಿತದ ಹಲವಾರು ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ. ಸೇತುವೆ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ಇತ್ತೀಚೆಗೆ ಹೂಳು ತೆಗೆಯುವ ಕೆಲಸ ಕೈಗೊಳ್ಳಲಾಗಿದೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿಟಿಐಗೆ ತಿಳಿಸಿದ್ದಾರೆ.ನಿನ್ನೆ ಸರನ್ ಜಿಲ್ಲೆಯಲ್ಲಿ ಎರಡು ಸಣ್ಣ ಸೇತುವೆಗಳ ಕುಸಿದು ಬಿದ್ದಿದ್ದವು. ಒಂದು ಜಂತಾ ಬಜಾರ್ ಪ್ರದೇಶದಲ್ಲಿ ಮತ್ತು ಇನ್ನೊಂದು ಲಹ್ಲಾದ್‌ಪುರ ಪ್ರದೇಶದಲ್ಲಿ.ಜಿಲ್ಲೆಯಲ್ಲಿ ಈ ಕಿರು ಸೇತುವೆಗಳು ಕುಸಿದಿರುವುದಕ್ಕೆ ಕಾರಣ ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.