ಉತ್ತರ ಪ್ರದೇಶ: ಕಮಲದ ಗಿಡ ಕೀಳಲು ಹೋಗಿ ನೀರು ಪಾಲಾದ ನಾಲ್ವರು ಬಾಲಕಿಯರು! ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸತ್ತಿಜೋರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಹ್ರೈಚ್: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಮಂಗಳವಾರ 10 ರಿಂದ 14 ವರ್ಷದೊಳಗಿನ ನಾಲ್ವರು ಬಾಲಕಿಯರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ಮೆಹಕ್ ಖಾತೂನ್(14), ಸಾಮಿಯಾ(10), ಸೈಬಾ(10) ಮತ್ತು ಸರಿಕುಲ್ ಖಾತೂನ್(13) ಅವರು ಕಮಲದ ಗಿಡಗಳನ್ನು ಕೀಳಲು ಹೊಂಡದಲ್ಲಿ ಇಳಿದಿದ್ದರು. ಈ ವೇಳೆ ಆಳವಾದ ನೀರಿಗೆ ಜಾರಿ ಬಿದ್ದು ಮುಳುಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸತ್ತಿಜೋರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ) ನನ್ಪಾರಾ ಅಶ್ವಿನಿ ಕುಮಾರ್ ಪಾಂಡೆ ಅವರು ಹೇಳಿದ್ದಾರೆ.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.