ರಾಜಸ್ಥಾನದಲ್ಲಿ : ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡಿದ ಯೋಧ!: ವಿಡಿಯೋ ವೈರಲ್ ಉತ್ತರ ಭಾರತದಲ್ಲಿ ತೀವ್ರಗೊಂಡಿದ್ದು, ರಾಜಸ್ಥಾನದಲ್ಲಿ ವರದಿಯಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಬಿಕಾನೆರ್‌: ಉತ್ತರ ಭಾರತದಲ್ಲಿ ತೀವ್ರಗೊಂಡಿದ್ದು, ರಾಜಸ್ಥಾನದಲ್ಲಿ ವರದಿಯಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ರಾಜಸ್ಥಾನದ ಬಿಕಾನೆರ್‌ ನಲ್ಲಿ ಬಿಎಸ್ ಎಫ್ ಯೋಧರೊಬ್ಬರು ಸುಡು ಬಿಸಿಲಿನಲ್ಲಿ ಮರಳ ಮೇಲೆ (ಹಪ್ಪಳ ಹುರಿದಿರುವುದು) ಮಾಡಿದ್ದಾರೆ.ಖಾಜುವಾಲದ ಬಳಿ ಇರುವ ಭಾರತ-ಪಾಕ್ ಗಡಿಯಲ್ಲಿ ಈ ದೃಶ್ಯ ಕಂಡುಬಂದಿದ್ದು, ಪ್ರದೇಶದಲ್ಲಿ ನ ತೀವ್ರತೆಯನ್ನು ತೋರುತ್ತಿದೆ.ಈ ಪ್ರಮಾಣದ ಬಿಸಿಲಿನಲ್ಲಿಯೂ ಬದ್ಧತೆಯಿಂದ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ. (@)ದೇಶದಾದ್ಯಂತ ಜನರು ಸುಡುವ ಶಾಖದಿಂದ ಬಳಲುತ್ತಿದ್ದಾರೆ. ಬಿಸಿಲಿನಿಂದ ತಪ್ಪಿಸಿಕೊಳ್ಳುವುದಕ್ಕೆ ಪರಿಹಾರಕ್ಕಾಗಿ ಹವಾನಿಯಂತ್ರಣ ಮತ್ತು ಕೂಲರ್‌ಗಳಂತಹ ಆಧುನಿಕ ಸೌಕರ್ಯಗಳನ್ನು ಆಶ್ರಯಿಸುತ್ತಿದ್ದಾರೆ. ಆದರೆ ಈ ಸೈನಿಕರು ಪಟ್ಟುಬಿಡದೇ ನಮ್ಮ ತಾಯ್ನಾಡಿನ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ಬಿಕಾನೆರ್‌ ನಲ್ಲಿ 47 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.