: ಉಗ್ರ ದಾಳಿಯ 34 ವರ್ಷಗಳ ಬಳಿಕ ಪುರಾತನ ಕಾಲದ ದೇವಸ್ಥಾನ ಮತ್ತೆ ಓಪನ್ 1990ರಲ್ಲಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿ ಹಾಳಾಗಿದ್ದ ಪುರಾತನ ಕಾಲದ ದೇವಸ್ಥಾನ ಬರೊಬ್ಬರಿ 34 ವರ್ಷಗಳ ಬಳಿಕ ಭಕ್ತರ ಸೇವೆಗೆ ಮತ್ತೆ ತೆರೆದುಕೊಂಡಿದೆ. ಅನಂತನಾಗ್: 1990ರಲ್ಲಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿ ಹಾಳಾಗಿದ್ದ ಪುರಾತನ ಕಾಲದ ದೇವಸ್ಥಾನ ಬರೊಬ್ಬರಿ 34 ವರ್ಷಗಳ ಬಳಿಕ ಭಕ್ತರ ಸೇವೆಗೆ ಮತ್ತೆ ತೆರೆದುಕೊಂಡಿದೆ.ಹೌದು.. ಅನಂತನಾಗ್‌ನಲ್ಲಿರುವ ಉಮಾ ಭಗವತಿ ದೇವಾಲಯ ಹಿಂದೂಗಳ ಪಾಲಿಗೆ ಬಹಳ ವಿಶೇಷವಾದ ದೇವಸ್ಥಾನವಾಗಿದ್ದು, ಕಳೆದ 34 ವರ್ಷಗಳ ಕಾಲ ಮುಚ್ಚಲ್ಪಟ್ಟ ಈ ಪವಿತ್ರ ದೇವಾಲಯವು ಕೊನೆಗೂ ಭಕ್ತರಿಗೆ ತನ್ನ ಬಾಗಿಲುಗಳನ್ನು ತೆರೆದಿದೆ.ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶಾಂಗಾಸ್ ಗ್ರಾಮದಲ್ಲಿ ರಾಗ್ನ್ಯಾ ದೇವಿ ದೇವಸ್ಥಾನ ಎಂದೂ ಕರೆಯಲ್ಪಡುವ ಉಮಾ ಭಗವತಿ ದೇವಸ್ಥಾನವಿದೆ. ಇದು ಪಾರ್ವತಿ ದೇವಿಯ ಅವತಾರವಾದ ಉಮಾ ದೇವಿಗೆ ಸಮರ್ಪಿತವಾದ ದೇವಸ್ಥಾನವಾಗಿದ್ದು, ಈ ದೇವಾಲಯವು 500 ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ.ಇಂತಹ ಇತಿಹಾಸ ಪ್ರಸಿದ್ಧ ದೇಗುಲವನ್ನು ಬರೊಬ್ಬರಿ 3 ದಶಕಗಳ ನಂತರ ಈ ದೇವಾಲಯವು ಪುನರಾರಂಭಗೊಂಡಿದ್ದು, ಸ್ಥಳೀಯರು ಮತ್ತು ಭಕ್ತರಲ್ಲಿ ಅಪಾರ ಸಂತೋಷ ಮತ್ತು ಉತ್ಸಾಹವನ್ನು ತಂದಿದೆ. 34 1990 , , ../ZWgQwn2QTgಉಗ್ರಗಾಮಿಗಳ ದಾಳಿಗೆ ತುತ್ತಾಗಿ ಹಾಳಾಗಿದ್ದ ಪುರಾತನ ದೇಗುಲ1990ರಲ್ಲಿ ಈ ಪ್ರದೇಶದಲ್ಲಿ ಉಗ್ರಗಾಮಿಗಳ ಆಕ್ರಮಣದಿಂದಾಗಿ ದೇವಾಲಯವನ್ನು ಮುಚ್ಚಲಾಯಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಣಿವೆಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಅಧಿಕಾರಿಗಳು ಈ ಪವಿತ್ರ ದೇಗುಲವನ್ನು ಪುನಃ ತೆರೆಯಲು ನಿರ್ಧರಿಸಿದರು. ಇದೀಗ ದೇಗುಲದ ಜೀರ್ಣೋದ್ಧಾರದ ಬಳಿಕ ಮತ್ತೆ ದೇಗುಲವನ್ನು ಭಕ್ತರಿಗಾಗಿ ತೆರೆಯಲಾಗಿದ್ದು, ಇದು ಭಕ್ತರ ಸಂತೋಷಕ್ಕೆ ಕಾರಣವಾಗಿದೆ. ದೇವಾಲಯದ ಪುನರಾರಂಭ ಸಮಾರಂಭದಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಭಾಗವಹಿಸಿದ್ದರು.#: ' 34 . . ../yVXPUGe8e9ದೇಗುಲದ ಐತಿಹ್ಯಇಲ್ಲಿನ ಸ್ಥಳೀಯ ಕಥೆಗಳ ಅನ್ವಯ ಈ ಉಮಾ ಭಗವತಿ ದೇವಸ್ಥಾನದ ಮಹತ್ವವು ಪ್ರಾಚೀನ ಕಾಲದಿಂದಲೂ ಗುರುತಿಸಿಕೊಂಡಿದೆ. ಶಿವನು ತನ್ನ ಪತ್ನಿ ಸತಿ ದೇವಿಯು ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡ ನಂತರ ಆಕೆಯ ಬಲಗೈ ಇದೇ ಉಮಾ ಭಗವತಿ ದೇವಾಲಯವಿರುವ ಈ ಸ್ಥಳದಲ್ಲಿಯೇ ಬಿದ್ದಿತು.ಪಾರ್ವತಿ ದೇವಿಯು ತಮ್ಮ ವಿವಾಹದ ಮೊದಲು ಶಿವನ ಆಶೀರ್ವಾದವನ್ನು ಪಡೆಯಲು ಇಲ್ಲಿ ಧ್ಯಾನ ಮಾಡಿದ್ದಳು ಎಂದು ನಂಬಲಾಗಿದೆ. ಈ ದೇವಾಲಯವು ಬ್ರಹ್ಮ ಕುಂಡ, ವಿಷ್ಣು ಕುಂಡ, ರುದ್ರ ಕುಂಡ, ಮತ್ತು ಶಿವಶಕ್ತಿ ಕುಂಡ ಸೇರಿದಂತೆ 5 ಬುಗ್ಗೆಗಳ ನಡುವೆ ಇದೆ ಎನ್ನಲಾಗುತ್ತದೆ.