ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಸಂಕಷ್ಟ: ವಿಧಾನಸಭೆ ಚುನಾವಣೆಗೂ ಮುನ್ನ ಪ್ರಬಲ ನಾಯಕರು ಪಕ್ಷಕ್ಕೆ ಗುಡ್ ಬೈ! ಜಮ್ಮುವಿನ ಹೊರವಲಯದಲ್ಲಿರುವ ಛಂಬ್ ವಿಧಾನಸಭಾ ಕ್ಷೇತ್ರದ ಖೌರ್ ಬ್ಲಾಕ್‌ನಲ್ಲಿ ಮಾಜಿ ಶಾಸಕ ರಾಜೀವ್ ಶರ್ಮಾ ಅವರನ್ನು ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ರ್ಯಾಲಿ ನಡೆಸಿದರು. ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಬಿಜೆಪಿಯ ಜಿಲ್ಲಾಧ್ಯಕ್ಷರು ಸೇರಿದಂತೆ ಇಬ್ಬರು ಬಿಜೆಪಿ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.ಜಮ್ಮುವಿನ ಹೊರವಲಯದಲ್ಲಿರುವ ಛಂಬ್ ವಿಧಾನಸಭಾ ಕ್ಷೇತ್ರದ ಖೌರ್ ಬ್ಲಾಕ್‌ನಲ್ಲಿ ಮಾಜಿ ಶಾಸಕ ರಾಜೀವ್ ಶರ್ಮಾ ಅವರನ್ನು ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ರ್ಯಾಲಿ ನಡೆಸಿದರು. ಇನ್ನು ಆಗಸ್ಟ್ 26ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ತನ್ನ ಟಿಕೆಟ್ ಹಂಚಿಕೆಯ ಬಗ್ಗೆ ಅಸಮಾಧಾನವನ್ನು ಎದುರಿಸುತ್ತಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜಮ್ಮು ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸಚಿವರು ಸೇರಿದಂತೆ ಹಲವು ಉನ್ನತ ನಾಯಕರು ಪರಿಸ್ಥಿತಿಯನ್ನು ಶಾಂತಗೊಳಿಸಲು ಭಿನ್ನಮತೀಯ ನಾಯಕರನ್ನು ಸಂಪರ್ಕಿಸಿದ್ದರೂ ಪ್ರಯೋಜನವಾಗಲಿಲ್ಲ.ಆದರೂ ಸೆಪ್ಟೆಂಬರ್ 18ರಂದು ಮೂರು ಹಂತದ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ 24 ಕ್ಷೇತ್ರಗಳ ಪೈಕಿ ರಾಂಬನ್ ಮತ್ತು ಪದ್ದರ್-ನಾಗಸೇನಿ ವಿಧಾನಸಭಾ ಕ್ಷೇತ್ರಗಳಿಂದ ಅದರ ಇಬ್ಬರು ಬಂಡಾಯ ನಾಯಕರು ಈಗಾಗಲೇ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾನು 42 ವರ್ಷಗಳಿಂದ ಕೆಲಸ ಮಾಡಿದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಪಕ್ಷದ ಸಾಂಬಾ ಜಿಲ್ಲಾ ಅಧ್ಯಕ್ಷ ಕಾಶ್ಮೀರ ಸಿಂಗ್ ಹೇಳಿದ್ದಾರೆ. ದಶಕಗಳಿಂದ ನಮ್ಮ ಸಿದ್ಧಾಂತವನ್ನು ವಿರೋಧಿಸಿದ್ದ ನ್ಯಾಶನಲ್ ಕಾನ್ಫರೆನ್ಸ್ () ನಾಯಕ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಮಾಜಿ ಸಚಿವ ಸುರ್ಜಿತ್ ಸಿಂಗ್ ಸಲಾಥಿಯಾರನ್ನು ಸಾಂಬಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಸಲಾಥಿಯಾ 2021ರಲ್ಲಿ ತೊರೆದು ಬಿಜೆಪಿಗೆ ಸೇರಿದ್ದರು. ಇನ್ನು ಸಾಂಬಾ ಕ್ಷೇತ್ರವನ್ನು 28 ವರ್ಷಗಳಿಂದ ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ.ನಾವು ಸಾಂಬಾದಲ್ಲಿ ಬಿಜೆಪಿಯನ್ನು ಬಲಪಡಿಸಿದ್ದೇವೆ ಮತ್ತು ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿಯವರ ಸಿದ್ಧಾಂತವನ್ನು ಮುಂದುವರಿಸಲು ನಾವು ಅನೇಕ ತ್ಯಾಗಗಳನ್ನು ಮಾಡಿದ್ದೇವೆ. ಅಲ್ಲದೆ 370ನೇ ವಿಧಿಯನ್ನು ತೆಗೆದುಹಾಕುವಂತೆ ಹಲವು ಪ್ರತಿಭಟನೆಗಳು ಮತ್ತು ಧರಣಿಗಳನ್ನು ನಡೆಸಿದ್ದೇವೆ. ಆದರೆ 370ನೇ ವಿಧಿಯನ್ನು ತೆಗೆದಿದ್ದನ್ನು ವಿರೋಧಿಸಿದ ನಾಯಕನಿಗೆ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿದರು.