ಭಾರತದಲ್ಲಿ -19 ನಿಂದ ವರದಿಗಿಂತ 8 ಪಟ್ಟು ಹೆಚ್ಚು ಜನ ಮೃತಪಟ್ಟಿದ್ದಾರೆ: ಅಧ್ಯಯನ ಬಹಿರಂಗ ಭಾರತದಲ್ಲಿ ಆರೋಗ್ಯ ಇಲಾಖೆ ನೀಡಿರುವ ಅಧಿಕೃತ ಕೋವಿಡ್-19 ಸಾವಿನ ಅಂಕಿಅಂಶಕ್ಕಿಂತ ಅಂದಾಜು ಎಂಟು ಪಟ್ಟು ಹೆಚ್ಚು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ 1.5 ಪಟ್ಟು ಹೆಚ್ಚಾಗಿದೆ ಎಂದು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ನವದೆಹಲಿ: 2020-21ರಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ತಲೆದೋರಿದ ಕೋವಿಡ್-19 ಮಹಾಮಾರಿ ಸೋಂಕು ಯಾವ ರೀತಿ ಸಾವು-ನೋವುಗಳಿಗೆ ಕಾರಣವಾಯಿತು ಎಂಬುದು ಇತಿಹಾಸ. ಭಾರತದಲ್ಲಿ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ 2020 ರಲ್ಲಿ 11.9 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿವೆ, 2019 ಕ್ಕೆ ಹೋಲಿಸಿದರೆ ಶೇಕಡಾ 17ರಷ್ಟು ಹೆಚ್ಚು ಮಂದಿ ಮೃತಪಟ್ಟಿದ್ದರು ಎಂದು ಅಂತಾರಾಷ್ಟ್ರೀಯ ಅಧ್ಯಯನ ಹೇಳಿದೆ.ಭಾರತದಲ್ಲಿ ಆರೋಗ್ಯ ಇಲಾಖೆ ನೀಡಿರುವ ಅಧಿಕೃತ ಕೋವಿಡ್-19 ಸಾವಿನ ಅಂಕಿಅಂಶಕ್ಕಿಂತ ಅಂದಾಜು ಎಂಟು ಪಟ್ಟು ಹೆಚ್ಚು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ 1.5 ಪಟ್ಟು ಹೆಚ್ಚಾಗಿದೆ ಎಂದು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.7.65 ಲಕ್ಷಕ್ಕೂ ಹೆಚ್ಚು ಜನರ ಅಂಕಿಅಂಶವನ್ನು ಬಳಸಿಕೊಂಡು, ಅಧ್ಯಯನವು ಭಾರತದಲ್ಲಿ 2019 ಮತ್ತು 2020 ರ ನಡುವೆ ಲಿಂಗ ಮತ್ತು ಸಾಮಾಜಿಕ ಗುಂಪಿನ ಮೂಲಕ ಜನನದ ಸಮಯದಲ್ಲಿ ಜೀವಿತಾವಧಿಯಲ್ಲಿ ಬದಲಾವಣೆಗಳನ್ನು ಅಂದಾಜಿಸಿದೆ, ಜಾಗತಿಕ ಸಾಂಕ್ರಾಮಿಕ ಹೆಚ್ಚುವರಿ ಸಾವುಗಳಲ್ಲಿ ಮೂರನೇ ಒಂದು ಭಾಗದಷ್ಟು ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ.ಈ ಅಂಕಿಅಂಶವನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (-5)ಯಿಂದ ಪಡೆಯಲಾಗಿದೆ. ಕೋವಿಡ್ ಸಾಂಕ್ರಾಮಿಕ ನಂತರ ಮಹಿಳೆಯರಲ್ಲಿ ಜೀವಿತಾವಧಿ 3.1 ವರ್ಷಗಳು ಕುಸಿದರೆ, ಪುರುಷರಲ್ಲಿ 2.1 ವರ್ಷಗಳು ಕಡಿಮೆಯಾಗಿದೆ ಎಂದು ಈ ಅಧ್ಯಯನ ನಡೆಸಿದ ಲೇಖಕರು ಹೇಳುತ್ತಾರೆ.ಭಾರತದಲ್ಲಿನ ಸಾವುಗಳು ವಯಸ್ಸಿನ ಗುಂಪುಗಳಲ್ಲಿ ಹೆಚ್ಚಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಪ್ರಮುಖವಾಗಿ ಕಿರಿಯ ಮತ್ತು ಹಿರಿಯರಲ್ಲಿ, ಆದರೆ ಹೆಚ್ಚಿನ ಆದಾಯದ ದೇಶಗಳಲ್ಲಿ ಜೀವಿತಾವಧಿಯಲ್ಲಿನ ಕುಸಿತವು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಹೆಚ್ಚಿದ ಸಾವುಗಳಿಂದ ಸಂಭವಿಸಿವೆ.ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳ ಪರೋಕ್ಷ ಪರಿಣಾಮಗಳು, ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳು ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಅಡೆತಡೆಗಳು ಕಿರಿಯ ವಯಸ್ಸಿನಲ್ಲಿ ಮರಣಕ್ಕೆ ಕಾರಣವಾಗಿವೆ ಎಂದು ಲೇಖಕರು ಹೇಳಿದ್ದಾರೆ.