ಜರ್ಮನಿ ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿ ಮಾಜಿ ಡಿಜಿಪಿ ಪುತ್ರ ಬಿಟ್ಟಿ ಮೊಹಾಂತಿ ಕ್ಯಾನ್ಸರ್‌ನಿಂದ ಸಾವು! ಜರ್ಮನ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಬಿಟ್ಟಿ ಮೊಹಾಂತಿ ಭುವನೇಶ್ವರದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ () ನಿಧನರಾಗಿದ್ದಾಗಿ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ. ಭುವನೇಶ್ವರ್: ಜರ್ಮನ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಬಿಟ್ಟಿ ಹೋತ್ರಾ ಮೊಹಾಂತಿ ಭುವನೇಶ್ವರದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ () ನಿಧನರಾಗಿದ್ದಾಗಿ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.ಆರೋಪಿ 40 ವರ್ಷದ ಬಿಟ್ಟಿ ಮೊಹಂತಿ ಒಡಿಶಾದ ಮಾಜಿ ಪೊಲೀಸ್ ಮಹಾನಿರ್ದೇಶಕ (ಜೈಲುಗಳು) ಬಿಬಿ ಮೊಹಾಂತಿ ಅವರ ಪುತ್ರ ಎಂದು ಮೂಲಗಳು ತಿಳಿಸಿವೆ. ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಿಟ್ಟಿ ಭುವನೇಶ್ವರದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾಗಿದ್ದಾರೆ.2006ರಲ್ಲಿ ರಾಜಸ್ಥಾನದ ನ್ಯಾಯಾಲಯವು ಜರ್ಮನಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಬಿಟ್ಟಿ ಮೊಹಾಂತಿಯನ್ನು ದೋಷಿ ಎಂದು ಘೋಷಿಸಿತು. ಅಲ್ಲದೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. 2006ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಭೇಟಿ ಮಾಡಲು ಪೆರೋಲ್ ಮೇಲೆ ಹೊರಬಂದಿದ್ದ ಬಿಟ್ಟಿ ಮೊಹಾಂತಿ ಪರಾರಿಯಾಗಿದ್ದನು.ಆದಾಗ್ಯೂ, 2013ರ ಮಾರ್ಚ್ ನಲ್ಲಿ ತನ್ನ ಗುರುತು ಬದಲಾಯಿಸಿಕೊಂಡು ಕೇರಳದಲ್ಲಿ ವಾಸಿಸುತ್ತಿದ್ದ ಬಿಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಮೊಹಾಂತಿ ತನ್ನ ಹೆಸರನ್ನು ರಾಘವ್ ರಂಜನ್ ಎಂದು ಬದಲಿಸಿಕೊಂಡು ನಕಲಿ ಹೆಸರಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದನು.ಸುಪ್ರೀಂ ಕೋರ್ಟ್ 2023ರಲ್ಲಿ ಮೊಹಾಂತಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. 2.5 ಲಕ್ಷ ಮೊತ್ತದ ಬಾಂಡ್ ಠೇವಣಿ ಇಟ್ಟ ಮೇಲೆ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದಲ್ಲದೆ, ಜಾಮೀನು ಅವಧಿಯಲ್ಲಿ ಪ್ರತಿ ತಿಂಗಳು ಕಟಕ್‌ನ ಕಂಟೋನ್ಮೆಂಟ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಮತ್ತು ಪಾಸ್‌ಪೋರ್ಟ್ ಒಪ್ಪಿಸುವಂತೆಯೂ ಆದೇಶಿಸಿತ್ತು.