ಪಾಕಿಸ್ತಾನದ ಪ್ರಸಿದ್ಧ ಯುವ ಸ್ನೂಕರ್ ಆಟಗಾರ ಮಜೀದ್ ಅಲಿ ಆತ್ಮಹತ್ಯೆ ಪಾಕಿಸ್ತಾನದ ಖ್ಯಾತ ಸ್ನೂಕರ್ ಆಟಗಾರ ಹಾಗೂ ಏಷ್ಯನ್ ಅಂಡರ್-21 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತ ಮಜೀದ್ ಅಲಿ ಪಂಜಾಬ್ ನ ಫೈಸಲಾಬಾದ್ ಬಳಿಯ ತನ್ನ ಹುಟ್ಟೂರಿನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರಾಚಿ: ಪಾಕಿಸ್ತಾನದ ಖ್ಯಾತ ಸ್ನೂಕರ್ ಆಟಗಾರ ಹಾಗೂ ಏಷ್ಯನ್ ಅಂಡರ್-21 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತ ಮಜೀದ್ ಅಲಿ ಪಂಜಾಬ್ ನ ಫೈಸಲಾಬಾದ್ ಬಳಿಯ ತನ್ನ ಹುಟ್ಟೂರಿನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅಲಿಗೆ 28 ವರ್ಷ ವಯಸ್ಸಾಗಿತ್ತು. ಖಿನ್ನತೆಯಿಂದ ಬಳಲುತ್ತಿದ್ದ ಅಲಿ ಮರ ಕಡಿಯುವ ಯಂತ್ರದಿಂದ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಕಾರವಾರ: ಸಾಲದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಗೋವಾದ ಕುಟುಂಬಮಜೀದ್ ಅಲಿ ಹಲವಾರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಅಗ್ರ ಶ್ರೇಯಾಂಕದ ಆಟಗಾರರಾಗಿದ್ದರು. ಒಂದು ತಿಂಗಳಲ್ಲಿ ಸಾವನ್ನಪ್ಪಿದ ಎರಡನೇ ಸ್ನೂಕರ್ ಆಟಗಾರ ಮಜೀದ್ ಅಲಿ. ಕಳೆದ ತಿಂಗಳು, ಅಂತರರಾಷ್ಟ್ರೀಯ ಸ್ನೂಕರ್ ಆಟಗಾರ ಮುಹಮ್ಮದ್ ಬಿಲಾಲ್ ಹೃದಯ ಸ್ತಂಭನದಿಂದ ನಿಧನರಾಗಿದ್ದರು.ಮಜೀದ್ ತನ್ನ ಹದಿಹರೆಯದಿಂದಲೂ ಖಿನ್ನತೆಯಿಂದ ಬಳಲುತ್ತಿದ್ದ. ಇದು ನಮಗೆ ಭಯಾನಕ ಸಂಗತಿಯಾಗಿದೆ. ಏಕೆಂದರೆ ಅತ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲಎಂದು ಸಹೋದರ ಉಮರ್ ಹೇಳಿದರು.