ತಾಂಜಾನಿಯ ಪ್ರಧಾನಿಯನ್ನು ಭೇಟಿ ಮಾಡಿದ ಸಂಜಯ್ ದತ್: ಅಲ್ಲಿನ ಚಿತ್ರೋದ್ಯಮಕ್ಕೆ ನೆರವಿನ ಭರವಸೆ ಪ್ರಧಾನಿ ಭೇಟಿಯ ಕುರಿತು ಸಂಜಯ್ ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಜೊತೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಡೊಡೊಮ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಕಾಸಿಮ್ ಮಜಲಿವ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ನಿವಾಸದಲ್ಲಿ ನಡೆದ ಭೇಟಿಯ ಕುರಿತು ಸಂಜಯ್ ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕಿಂತ ಹೆಚ್ಚಾಗಿ ವರ್ಣಭೇದ ತಾಂಡವ: ನವಾಜುದ್ದೀನ್ ಸಿದ್ದಿಕಿ ಬಾಂಬ್ಫೋಟೋಗಳಲ್ಲಿ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಜೊತೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಈ ಬಗ್ಗೆ ಹಂಚಿಕೊಂಡ ಸಂದೇಶದಲ್ಲಿ ತಾಂಜಾನಿಯ ಚಿತ್ರೋದ್ಯಮಕ್ಕೆ ನೆರವು ನೀಡಲು ಹಾಗೂ ಸುಂದರ ತಾಂಜಾನಿಯಾ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ! ' ! ! ../AJbXS6v5lwಇದನ್ನೂ ಓದಿ: 'ಓ ಮೈ ಗಾಡ್' ಅಕ್ಷಯ್ ಕುಮಾರ್ ಗೆ 'ಶೀಲಾ ಕಿ ಜವಾನಿ' ಕತ್ರೀನಾ ಕೈಫ್ ಕಪಾಳ ಮೋಕ್ಷ ಮಾಡಿದ್ದೇಕೆ?ಇದೇ ವೇಳೆ ತಾಂಜಾನಿಯಾ ಅರೆ ಸ್ವಾಯತ್ತ ಪ್ರದೇಶ ಜಂಜಿಬರ್ ನ ರಾಯಭಾರಿಯಾಗಿ ಸಂಜಯ್ ದತ್ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಣ್ ಬೀರ್ ಜೊತೆಗೆ ರಿಲೇಷನ್ ಶಿಪ್ ಅಧಿಕೃತವಾಗಿ ಬಹಿರಂಗಪಡಿಸಿದ ಆಲಿಯಾ