72 ಜನರಿದ್ದ ವಿಮಾನ ನೇಪಾಳದಲ್ಲಿ ಪತನ, 32 ಮಂದಿ ಸಾವು: ಯೇತಿ ವಿಮಾನಯಾನ ಸಂಸ್ಥೆ 72 ಜನರಿದ್ದ ವಿಮಾನ ಭಾನುವಾರ ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡಿದ್ದು, 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಯೇತಿ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಕಾಠ್ಮಂಡು: 72 ಜನರಿದ್ದ ವಿಮಾನ ಭಾನುವಾರ ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡಿದ್ದು, 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಯೇತಿ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ. ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಅಥವಾ ಬದುಕುಳಿದಿದ್ದಾರೆ ಎಂಬ ಬಗ್ಗೆ ನಮಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಸುದರ್ಶನ್ ಬರ್ತೌಲಾ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದರು.# | . 68 . . ../DBDbTtTxNcನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ () ಪ್ರಕಾರ, ಯೇತಿ ಏರ್‌ಲೈನ್ಸ್‌ನ 9N- -72 ವಿಮಾನವು ಕಠ್ಮಂಡುವಿನಿಂದ ಬೆಳಿಗ್ಗೆ 10.33ಕ್ಕೆ ಹೊರಟಿತ್ತು. ಬಳಿಕ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ, ಹಳೆಯ ವಿಮಾನ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ಪತನಗೊಂಡಿದೆ.ವಿಮಾನ ಅವಶೇಷಗಳು ಬೆಂಕಿಗಾಹುತಿಯಾಗಿದ್ದು, ರಕ್ಷಣಾ ತಂಡ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿ ಗುರುದತ್ತ ಧಾಕಲ್ ತಿಳಿಸಿದ್ದಾರೆ.ರಕ್ಷಣಾ ತಂಡಗಳು ಈಗಾಗಲೇ ಸ್ಥಳಕ್ಕೆ ತಲುಪಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ರಕ್ಷಣಾ ತಂಡಗಳು ಮೊದಲು ಬೆಂಕಿಯನ್ನು ನಂದಿಸಲು ಮತ್ತು ಪ್ರಯಾಣಿಕರನ್ನು ರಕ್ಷಿಸಲು ಗಮನಹರಿಸಿವೆ ಎಂದು ಧಾಕಲ್ ಹೇಳಿದರು.ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಅಪಘಾತದ ವಿವರಗಳು ಇನ್ನಷ್ಟೇ ಬರಬೇಕಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳು ಮತ್ತು ವಿಡಿಯೋಗಳಲ್ಲಿ ಪತನದಿಂದಾಗಿ ಏಳುತ್ತಿರುವ ಹೊಗೆಯನ್ನು ತೋರಿಸಿದೆ.