ಚೀನಾದಲ್ಲಿ ಷಿ ಜಿನ್ಪಿಂಗ್ ಪಾರುಪತ್ಯ ಖಾತ್ರಿ, ಲೀ ಕೆಕಿಯಾಂಗ್ ನ 2ನೇ ಸ್ಥಾನಕ್ಕೆ ಕತ್ತರಿ! ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದಲ್ಲಿ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಪರಮಾಧಿಕಾರ ಮುಂದುವರೆದಿದ್ದು, ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ. ಬೀಜಿಂಗ್: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದಲ್ಲಿ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಪರಮಾಧಿಕಾರ ಮುಂದುವರೆದಿದ್ದು, ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ.ಪಕ್ಷದ ಕಾಂಗ್ರೆಸ್ 2 ನೇ ಪ್ರಬಲ, ಹಿರಿಯ ನಾಯಕನಾಗಿದ್ದ ಲೀ ಕೆಕಿಯಾಂಗ್ ಅವರನ್ನು ಹಿರಿಯ ನಾಯಕತ್ವದಿಂದ ತೆಗೆದುಹಾಕಿದೆ. ಲೀ ಕೆಕಿಯಾಂಗ್ ಮಾರುಕಟ್ಟೆ ಆಧಾರಿತ ಸುಧಾರಣೆಗಳ ಪ್ರತಿಪಾದಕರಾಗಿದ್ದು, ಷಿ ತತ್ವಗಳಿಗೆ ವಿರುದ್ಧವಾದ ಆಲೋಚನೆಗಳನ್ನು ಹೊಂದಿರುವ ನಾಯಕರಾಗಿದ್ದಾರೆ. ಇದನ್ನೂ ಓದಿ: ಪಾಕ್-ಚೀನಾಗೆ ಟಕ್ಕರ್: ಪಿಒಕೆ, ಅಕ್ಸಯ್ ಚಿನ್ ಭಾರತದ ಅವಿಭಾಜ್ಯ ಅಂಗ ಎಂದು ಬಿಂಬಿಸಿದ ರಷ್ಯಾ ನಕ್ಷೆ!ಸಪ್ತಾಹ ಸಭೆ ಶನಿವಾರ ಮುಕ್ತಾಯಗೊಂಡಿದ್ದು, ಆರ್ಥಿಕತೆಗೆ ಷಿ ಜಿನ್ಪಿಂಗ್ ಅವರ ಪ್ರಮುಖ ನೀತಿ ಉಪಕ್ರಮಗಳು ಸಭೆಯಲ್ಲಿ ಚರ್ಚೆಯಾಗಿದ್ದು, ವಿಶ್ಲೇಷಕರು ಈ ಸಭೆಯಲ್ಲಿ ಷಿ ಜಿನ್ಪಿಂಗ್ ಅವರ ಪರಮಾಧಿಕಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳನ್ನು ಎದುರು ನೋಡುತ್ತಿದ್ದರು ಆದರೆ ಶನಿವಾರ ಅಂತ್ಯಗೊಂಡ ಸಭೆಯಲ್ಲಿ ಅಂತಹ ಯಾವುದೇ ಲಕ್ಷಗಣಗಳೂ ಗೋಚರಿಸಲಿಲ್ಲ. ಇತ್ತ ಲೀ ಕೆಕಿಯಾಂಗ್ ಅವರನ್ನು 2ನೇ ಪ್ರಭಾವಿ ಹುದ್ದೆಯಿಂದ ಕೆಳಗಿಳಿಸಿದ್ದೂ ಅನಿರೀಕ್ಷಿತವೇನು ಆಗಿರಲಿಲ್ಲ.