ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂ ಕೋರ್ಟ್ ಆದೇಶ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ಕಠ್ಮಂಡು: ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.19 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಚಾರ್ಲ್ಸ್ ಶೋಭರಾಜ್ಗೆ ವಯಸ್ಸಿನ ಆಧಾರದ ಮೇಲೆ ನೇಪಾಳ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ.ಇದನ್ನು ಓದಿ: ಪತಂಜಲಿ ಉತ್ಪನ್ನ ಸೇರಿ 16 ಭಾರತೀಯ ಕಂಪನಿಗಳ ಔಷಧಿ ಆಮದು ನಿಷೇಧಿಸಿದ ನೇಪಾಳಇಬ್ಬರು ಅಮೆರಿಕನ್ ಪ್ರವಾಸಿಗರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಶೋಭರಾಜ್ 2003 ರಿಂದ ನೇಪಾಳಿ ಜೈಲಿನಲ್ಲಿದ್ದಾನೆ.ಜೈಲಿನಿಂದ ಬಿಡುಗಡೆಯಾದ 15 ದಿನಗಳಲ್ಲಿ ಚಾರ್ಲ್ಸ್ ಶೋಭರಾಜ್ ನನ್ನು ಗಡಿಪಾರು ಮಾಡುವಂತೆಯೂ ನೇಪಾಳ ಸುಪ್ರೀಂ ಕೋರ್ಟ್ ಆದೇಶಿಸಿದೆ.