ತೈಲ ಖರೀದಿಗೆ ಭಾರತದ ಬಳಿ 3,749 ಕೋಟಿ ರೂ. ಸಾಲದ ನೆರವು ಕೇಳಿದ ಶ್ರೀಲಂಕಾ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ದೇಶ ಇಂಧನ ಕೊರತೆ ಎದುರಿಸುತ್ತಿದೆ. ಹೀಗಾಗಿ ಭಾರತದ ನೆರವು ಕೋರಿದೆ ಎಂದು ಶ್ರೀಲಂಕಾ ಇಂಧನ ಸಚಿವ ಉದಯ ಗಮನ್ ಪಿಲಾ ಹೇಳಿದ್ದಾರೆ. ಕೊಲಂಬೊ: ಇಂಧನ ಅಭಾವವನ್ನು ಎದುರಿಸುತ್ತಿರುವ ಶ್ರೀಲಂಕಾ ತೈಲ ಪೂರೈಕೆ ಸ್ಥಗಿತ ತಡೆಗಟ್ಟಲು ಭಾರತದ ಬಳಿ 3,749 ಕೋಟಿ ರೂ. ಸಾಲ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂಡು ಶ್ರೀಲಂಕಾ ತಿಳಿಸಿದೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ಪ್ರಮುಖ ವಿಚಾರವೇ ಅಲ್ಲ, 'ಶೇ.95 ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ': ಉತ್ತರ ಪ್ರದೇಶ ಸಚಿವಮುಂದಿನ ವರ್ಷ ಜನವರಿ ತನಕ ಶ್ರೀಲಂಕಾಗೆ ತೈಲ ಪೂರೈಕೆ ನಡೆಯಲಿದೆ. ಜನವರಿ ನಂತರ ತೈಲ ಪೂರೈಕೆ ಎಂದಿನಂತೆ ನಡೆಯಬೇಕೆಂದರೆ ಓಮನ್ ಗೆ ಇಂಧನ ಶುಲ್ಕ ಪಾವತಿಸಬೇಕಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ದೇಶ ಇಂಧನ ಶುಲ್ಕ ಭರಿಸಲು ಅಶಕ್ತವಾಗಿದೆ. ಹೀಗಾಗಿ ಭಾರತದ ನೆರವು ಕೋರಿದೆ ಎಂದು ಶ್ರೀಲಂಕಾ ಇಂಧನ ಸಚಿವ ಉದಯ ಗಮನ್ ಪಿಲಾ ಹೇಳಿದ್ದಾರೆ.ಇದನ್ನೂ ಓದಿ: ಉತ್ತರ ಭಾರತದಲ್ಲಿ ಗಗನಕ್ಕೇರಿದ ತರಕಾರಿಗಳ ಬೆಲೆ: ತೈಲ ಬೆಲೆಯೇರಿಕೆ ಮತ್ತು ಅತಿವೃಷ್ಟಿ ಕಾರಣಭಾರತದ ಇಂಡೀಯನ್ ಆಯಿಲ್ ಸಂಸ್ಥೆಯ ಅಧೀನದಲ್ಲಿರುವ ಅಲ್ಲಿನ ಲಂಕಾ ಐಒಸಿ 1 ಲೀ. ಪೆಟ್ರೋಲ್ ಹಗೂ ಡೀಸೆಲ್ ಬೆಲೆಯನ್ನು 5 ರೂ.ಗಳಿಂದ ಏರಿಸಿತ್ತು. ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಸಂಸ್ಥೆ ಮುಂದಿನ ದಿನಗಳಲ್ಲಿ ತೈಲ ದರ ಏರಿಸಲು ಚಿಂತನೆ ನಡೆಸಿದೆ. ಇದನ್ನೂ ಓದಿ: ಉಚಿತ ಕೋವಿಡ್ ಲಸಿಕೆ ನೀಡಿದ್ದೇ ಇಂಧನ ದರ ಏರಿಕೆಗೆ ಕಾರಣ: ಕೇಂದ್ರ ಸಚಿವ ರಾಮೇಶ್ವರ್ ತೆಲಿನಾಗಪಟ್ಟಿಣಂ: ಗಡಿ ದಾಟಿ ಬಂದು ಭಾರತದ ಕಡಲ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಶ್ರೀಲಂಕಾ ಮೀನುಗಾರರ ಬಂಧನಕ್ರಿಕೆಟ್: ನವೆಂಬರ್ ನಲ್ಲಿ ನ್ಯೂಜಿಲೆಂಡ್, ಫೆಬ್ರವರಿಯಲ್ಲಿ ಶ್ರೀಲಂಕಾ ತಂಡದಿಂದ ಭಾರತ ಪ್ರವಾಸ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆಶ್ರೀಲಂಕಾಗೆ 150 ಟನ್ ಆಮ್ಲಜನಕ ದೇಣಿಗೆ: ಕೊರೊನಾ ಸಂಕಟ ಕಾಲದಲ್ಲಿ ಮಿತ್ರರಾಷ್ಟ್ರಕ್ಕೆ ನೆರವಾದ ಭಾರತಆಹಾರ ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳ ಸೈನಿಕರಿಂದ ಕಲ್ಲು ತೂರಾಟ