ಅಮೆರಿಕ: -1B ವೀಸಾದಾರರ ಪತ್ನಿಯರಿಗೆ ಉದ್ಯೋಗ ಪರವಾನಗಿ; ಬೈಡನ್ ಸರ್ಕಾರದ ಮಹತ್ವದ ನಿರ್ಧಾರ -1B ವೀಸಾ ಹೊಂದಿರುವವರಲ್ಲಿ ಬಹುತೇಕರು ಭಾರತೀಯ ಐಟಿ ಉದ್ಯೋಗಿಗಳಾಗಿದ್ದಾರೆ. ಬೈಡನ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿರುವುದು ಭಾರತೀಯರಿಗೆ ಸಂತಸ ತಂದಿದೆ. ವಾಷಿಂಗ್ಟನ್: ವಲಸೆ ನಿಯಮಗಳನ್ನು ಸಡಿಲಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಅಮೆರಿಕ -1B ವೀಸಾದಾರರ ಪತ್ನಿಯರು ಅಮೆರಿಕದಲ್ಲಿ ಉದ್ಯೋಗ ಮಾಡಲು ಅನುಮತಿ ನೀಡಿದೆ. ಅಮೆರಿಕದ ಬೈಡನ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿರುವುದು ಭಾರತೀಯರಿಗೆ ಸಂತಸ ತಂದಿದೆ. ಇದನ್ನೂ ಓದಿ: ಟ್ರಂಪ್ ಅವಧಿಯ ಹೆಚ್-1ಬಿ ವೀಸಾ ಆಯ್ಕೆ ಪ್ರಕ್ರಿಯೆ ಪ್ರಸ್ತಾವ ವಜಾಗೊಳಿಸಿದ ಯುಎಸ್ ಕೋರ್ಟ್-1B ವೀಸಾ ಹೊಂದಿರುವವರಲ್ಲಿ ಬಹುತೇಕರು ಭಾರತೀಯ ಐಟಿ ಉದ್ಯೋಗಿಗಳಾಗಿದ್ದಾರೆ. ವಿಶೇಷ ಪರಿಣತಿ ಪಡೆದಿರುವ ಕೌಶಲ್ಯಪೂರ್ಣ ವಿದೇಶಿ ಪ್ರಜೆಗಳು, ಪ್ರತಿಭಾನ್ವಿತರು ಅಮೆರಿಕದಲ್ಲಿ ನೌಕರಿ ಮಾಡಲು -1B ವೀಸಾ ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಭಾರತ ಪ್ರವೇಶಿಸಲಿಚ್ಛಿಸುವ ಆಫ್ಘನ್ನರಿಗೆ ಇನ್ಮುಂದೆ ಇ-ವೀಸಾ ಕಡ್ಡಾಯಅಮೆರಿಕದ ಐಟಿ ಕಂಪನಿಗಳು ಇದೇ ವೀಸಾವನ್ನು ನೆಚ್ಚಿಕೊಂಡಿದೆ. ಭಾರತದಿಂದ ಮತ್ತು ಚೀನಾದಿಂದ ತಮ್ಮ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಇದೇ ವೀಸಾ ಆಧಾರದ ಮೇಲೆ ಕರೆಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತವೆ. ಇದನ್ನೂ ಓದಿ: 2 ನೇ ಹಂತದ ಲಾಟರಿ ಮೂಲಕ ಹೆಚ್1ಬಿ ವೀಸಾ ಅರ್ಜಿಗಳ ಆಯ್ಕೆಗೆ ಮುಂದಾದ ಅಮೆರಿಕ ಹಾಗೆ ಅಮೆರಿಕಕ್ಕೆ ಬಂದ -1B ವೀಸಾದಾರರ ಪತ್ನಿಯರು ಅಲ್ಲಿನ ನೆಲದಲ್ಲಿ ಕೆಲಸ ಮಾಡಲು ಪರವಾನಗಿ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಿತ್ತು. ಇದೀಗ -1B ವೀಸಾದಾರ ಪತ್ನಿಯರಿಗೆ ಈ ಪರವಾನಗಿ ನೇರವಾಗಿಯೇ ದೊರೆಯಲಿದೆ. ಇದನ್ನೂ ಓದಿ: ನಕಲಿ ಪಾಸ್‌ಪೋರ್ಟ್‌, ವೀಸಾ ಬಳಸಿ ಜನರನ್ನು ವಿದೇಶಕ್ಕೆ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಎಟಿಎಸ್ಭಾರತದ ನೇತೃತ್ವವನ್ನು ಹಿಂಬಾಲಿಸಿದ ಅಮೆರಿಕ!: ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟಕ್ಕೆ ಸೇರ್ಪಡೆವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಮತ್ತೆ ಹೊರಹೊಮ್ಮಿದ ಮೋದಿ: ಅಮೆರಿಕ ಸಂಸ್ಥೆ ಸಮೀಕ್ಷೆಯಲ್ಲಿ ಸಾಬೀತುಶ್ವೇತ ಭವನದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ಪಿತ್ತಕೋಶ ಕ್ಯಾನ್ಸರ್ ಗೆ ಮನೆಮದ್ದು ಗಣಿಕೆ ಸೊಪ್ಪು: ಸಂಶೋಧನೆಗೆ ಅಮೆರಿಕದ ಎಫ್ ಡಿಎ ಅನುಮೋದನೆಅಮೆರಿಕ ಡಲ್ಲಾಸ್ ಅಂತರಾಷ್ಟ್ರೀಯ ಚಿತ್ರೋತ್ಸವ: ಕುಮಾರ್ ಗೋವಿಂದ್ 'ಅತ್ಯುತ್ತಮ ನಟ'ಜಾರ್ಜಿಯಾದಲ್ಲಿ ಅಧಿಕೃತವಾಗಿ ನವೆಂಬರ್ 1 ರಾಜ್ಯೋತ್ಸವ ದಿನ ಆಚರಣೆ: ಅಮೆರಿಕದಲ್ಲಿ ಮೊಳಗಿದ ಕನ್ನಡ ಕಹಳೆ