ಡ್ರೋನ್ ದಾಳಿ ಮೂಲಕ ಇರಾಕ್ ಪ್ರಧಾನಿ ಹತ್ಯೆ ಯತ್ನ: ಮೈನವಿರೇಳಿಸುವ ರೀತಿಯಲ್ಲಿ ಪಾರು ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಜೋನ್ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ. ಬಾಗ್ದಾದ್: ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಅವರ ಹತ್ಯೆ ಸಂಚು ವಿಫಲಗೊಂಡು ಪ್ರಧಾನಿ ಸ್ವಲ್ಪದರಲ್ಲೇ ಪಾರಾದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಜೋನ್ ಎಂಬಲ್ಲಿ ನೆಲೆಗೊಂಡ ಪ್ರಧಾನಿ ನಿವಾಸ ಬಳಿಯೇ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ.ಇದನ್ನೂ ಓದಿ: ಬಾಗ್ದಾದ್‌ನಲ್ಲಿ ಅವಳಿ ಆತ್ಮಾಹುತಿ ಬಾಂಬ್ ದಾಳಿ, ಕನಿಷ್ಠ 28 ಮಂದಿ ಸಾವುಶಸ್ತ್ರಸಜ್ಜಿತ ಡ್ರೋನ್ ಮೂಲಕ ಪ್ರಧಾನಿ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಪ್ರಧಾನಿಯ ಅಂಗರಕ್ಷಕರು ಸೇರಿದಂತೆ ಒಟ್ಟು 7 ಮಂದಿ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಖಾಸಿಮ್ ಸೊಲೈಮನಿ ಹತ್ಯೆ: ಟ್ರಂಪ್‍ ವಿರುದ್ಧ ಬಂಧನ ವಾರಂಟ್‍ ಜಾರಿಗೊಳಿಸಿದ ಇರಾಕ್‍ ನ್ಯಾಯಾಲಯದಾಳಿ ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಟ್ವೀಟ್ ಮಾಡಿದ್ದು, ದೇವರ ದಯದಿಂದ ತಾವು ಸುರಕ್ಷಿತವಾಗಿದ್ದು, ಜನರೊಂದಿಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇರಾಕ್ ನಲ್ಲಿ ಐಸಿಸ್ ಉಗ್ರರ ಭೀಕರ ದಾಳಿ; 13 ಮಂದಿ ಪೊಲೀಸರ ಸಾವು, ಹಲವರಿಗೆ ಗಾಯಅಲ್ಲದೆ ದಾಳಿ ಘಟನೆ ನಡೆದ ನಂತರ ಹಿಂದಿನ ದಿನವೇ ನಿಗದಿಯಾಗಿದ್ದ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಶಾಂತಚಿತ್ತರಾಗಿ ಕಂಡುಬಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದುವರೆಗೂ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.ಇದನ್ನೂ ಓದಿ: ಇರಾಕ್ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ, 54 ಮಂದಿ ಸಾವುಶಿಯಾ ಬಂಡುಕೋರ ಸಂಘಟನೆ ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷದ ವಾತಾವರಣ ದೇಶದಲ್ಲಿ ನಿರ್ಮಾಣಗೊಂಡಿತ್ತು. ಇರಾಕ್ ಸಂಸತ್ ಚುನಾವಣಾ ಫಲಿತಾಂಶವನ್ನು ಶಿಯಾ ಬಂಡುಕೋರ ಪರ ಸಂಘಟನೆಗಳು ವಿರೋಧಿಸಿದ್ದವು.ಇದನ್ನೂ ಓದಿ: ಅಫ್ಗಾನ್‌ ಜೈಲಿನಿಂದ ಹೊರಬಂದ ಖೈದಿಗಳು ಐಸಿಸ್‌, ಅಲ್‌ಖೈದಾ ಉಗ್ರ ಸಂಘಟನೆಗೆ ಸೇರ್ಪಡೆತೈಲ ಟ್ಯಾಂಕರ್ ಪಲ್ಟಿ: ತೈಲಕ್ಕಾಗಿ ಮುಗಿಬಿದ್ದ ಜನ; ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 92 ಮಂದಿ ಸಜೀವದಹನ!ಜರ್ಮನಿಯ ಹೈಸ್ಪೀಡ್ ರೈಲಿನಲ್ಲಿ ಚಾಕುವಿನಿಂದ ದಾಳಿ, ಹಲವರಿಗೆ ಗಾಯ'ಸಕ್ಕರೆ ಬಾಂಬ್'ಗೆ ಜನ ಕಂಗಾಲ್: 1 ಕೆಜಿ ಸಕ್ಕರೆ ಬೆಲೆ ಪೆಟ್ರೋಲ್‌ಗಿಂತ ಹೆಚ್ಚು; ಇಮ್ರಾನ್ ಖಾನ್‌ಗೆ ಜನರ ಹಿಡಿ ಶಾಪ!ವಾಯುಮಾಲಿನ್ಯ ಹೆಚ್ಚಳ: ದಟ್ಟ ಹೊಗೆಯಿಂದಾಗಿ ಚೀನಾದಲ್ಲಿ ಆಟದ ಮೈದಾನಗಳು, ಹೆದ್ದಾರಿಗಳು ಬಂದ್ಶ್ವೇತ ಭವನದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ದೀಪಾವಳಿ ನಿಮಿತ್ತ ಮಹಾತ್ಮ ಗಾಂಧಿ ಸ್ಮರಣಾರ್ಥ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಬ್ರಿಟನ್ ಸಚಿವ ರಿಷಿ ಸುನಕ್