ಇಸ್ರೇಲ್-ಹಮಾಸ್ ಯುದ್ಧದಲ್ಲಿ ಭಾರತ ಮೂಲದ ಭದ್ರತಾ ಅಧಿಕಾರಿ ಸೇರಿ ಇಬ್ಬರ ಸಾವು: ವರದಿ ಹಮಾಸ್ ಉಗ್ರ ಸಂಘಟನೆ ಹಾಗೂ ಇಸ್ರೇಲಿ ಸೇನೆ ವಿರುದ್ಧದ ಯುದ್ಧದಲ್ಲಿ ಭಾರತ ಮೂಲದ ಭದ್ರತಾ ಅಧಿಕಾರಿಗಳು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಟೆಲ್ ಅವೀವ್: ಹಮಾಸ್ ಉಗ್ರ ಸಂಘಟನೆ ಹಾಗೂ ಇಸ್ರೇಲಿ ಸೇನೆ ವಿರುದ್ಧದ ಯುದ್ಧದಲ್ಲಿ ಭಾರತ ಮೂಲದ ಭದ್ರತಾ ಅಧಿಕಾರಿಗಳು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಭಾರತೀಯ ಮೂಲದ ಕನಿಷ್ಠ ಇಬ್ಬರು ಇಸ್ರೇಲಿ ಮಹಿಳಾ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಶ್ಡೋಡ್‍ನ ಹೋಮ್ ಫ್ರಂಟ್ ಕಮಾಂಡ್‍ನಲ್ಲಿ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಓರ್ ಮೋಸೆಸ್ ಮತ್ತು ಪೊಲೀಸ್ ಸೆಂಟ್ರಲ್ ಡಿಸ್ಟ್ರಿಕ್ಟ್ ನ ಬಾರ್ಡರ್ ಅಧಿಕಾರಿ ಕಿಮ್ ಡೋಕ್ರಾಕರ್ ಅವರು ಅಕ್ಟೋಬರ್ 7 ರಂದು ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ಯುದ್ಧದಲ್ಲಿ ಕರ್ತವ್ಯದ ವೇಳೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಹಮಾಸ್ ಭೀಭತ್ಸ ಮತ್ತು ಗಾಜಾ ಯುದ್ಧ: ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಮೂಲಸಮುದಾಯದ ಶಹಾಫ್ ಟಾಕರ್ ಎಂಬ ಒಬ್ಬ ಯುವತಿ ತನ್ನ ಸ್ನೇಹಿತನೊಂದಿಗೆ ದಾಳಿಯಿಂದ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಯುದ್ಧದಲ್ಲಿ ಇದುವರೆಗೆ 286 ಸೇನಾ ಯೋಧರು ಮತ್ತು 51 ಪೊಲೀಸ್ ಅಧಿಕಾರಿಗಳು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸತ್ತವರ, ಕಾಣೆಯಾದ ಹಾಗೂ ಅಪಹರಣಕ್ಕೊಳಗಾದವರ ಹುಡುಕಾಟವನ್ನು ಮುಂದುವರೆಸುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಗಾಜಾದಾದ್ಯಂತ ಇರುವ ವಿಶ್ವಸಂಸ್ಥೆ ಆಶ್ರಯ ಪ್ರದೇಶಗಳಲ್ಲಿ ನೀರಿಗೆ ತತ್ವಾರ!ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಭಾನುವಾರ ತಿಳಿಸಿದೆ. ಯುದ್ಧದಲ್ಲಿ 2,670 ಪ್ಯಾಲೇಸ್ಟಿನಿಯನ್ನರು ಸಾವಿಗೀಡಾಗಿದ್ದಾರೆ. 9,600 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.