ಭಾರತದ ಪ್ರಧಾನಿ ಮೋದಿಯನ್ನು ಯಾರಿಂದಲೂ ಹೆದರಿಸಲು ಸಾಧ್ಯವಿಲ್ಲ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಮತ್ತು ಭಾರತೀಯರ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಯಾವುದೇ ಕ್ರಮ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ( ) ಯಾರೂ ಹೆದರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ( ) ಹೇಳಿದ್ದಾರೆ. ಮಾಸ್ಕೋ: ಭಾರತ ಮತ್ತು ಭಾರತೀಯರ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಯಾವುದೇ ಕ್ರಮ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ( ) ಯಾರೂ ಹೆದರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ( ) ಹೇಳಿದ್ದಾರೆ.ಮಾಸ್ಕೋದಲ್ಲಿ ನಡೆದ ʼರಷ್ಯಾ ಕಾಲಿಂಗ್ʼ ಹೂಡಿಕೆ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಕುರಿತು ಮಾತನಾಡುತ್ತಾ, 'ಮೋದಿಯವರನ್ನು ಯಾರೂ ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ ನಿರ್ಧಾರ ತೆಗೆದುಕೊಳ್ಳುವಂತೆ ಬಲವಂತಪಡಿಸಬಹುದು, ಅಂಥ ಒತ್ತಡವನ್ನು ಅವರು ಅನುಭವಿಸಬಹುದು ಎಂದು ಊಹಿಸಲು ಸಾಧ್ಯವಿಲ್ಲ. ನಾನು ಸದಾ ಗಮನಿಸುತ್ತಿರುತ್ತೇನೆ, ಭಾರತೀಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಅವರ ಕಠಿಣ ನಿಲುವು ನನಗೆ ಆಶ್ಚರ್ಯಕರವಾಗಿದೆ. ಅವರು ಎಂದಿಗೂ ಬಾಹ್ಯ ಒತ್ತಡಗಳ ಬಗ್ಗೆ ತನ್ನೊಂದಿಗೆ ಮಾತನಾಡಿಯೇ ಇಲ್ಲ. ʼಸ್ನೇಹರಹಿತ ದೇಶಗಳʼ ಬಾಹ್ಯ ಒತ್ತಡದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ದೃಢವಾದ ನಾಯಕತ್ವ ಭಾರತಕ್ಕೆ ದೊರೆತಿದೆ ಎಂದು ಶ್ಲಾಘಿಸಿದ್ದಾರೆ.ಇದನ್ನೂ ಓದಿ: ಸಿಖ್ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು ಆರೋಪ: ಸಮಗ್ರ ತನಿಖೆಯಾಗಬೇಕು; ಭಾರತಕ್ಕೆ ಅಮೆರಿಕಾ ಆಗ್ರಹಅಂತೆಯೇ ಭಾರತ- ರಷ್ಯಾ (- ) ಬಾಂಧವ್ಯವು ಎಲ್ಲಾ ರಂಗಗಳಲ್ಲಿ ಪ್ರಗತಿಯಲ್ಲಿದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಎಲ್ಲಾ ಪಥಗಳಲ್ಲಿ ಪ್ರಗತಿಪರವಾಗಿ ಅಭಿವೃದ್ಧಿ ಹೊಂದುತ್ತಿವೆ. ಇದರ ಮುಖ್ಯ ಭರವಸೆ ಪ್ರಧಾನಿ ಮೋದಿ ಅವರು ಅನುಸರಿಸುತ್ತಿರುವ ನೀತಿಯಾಗಿದೆ ಎಂದು ಪುಟಿನ್ ಹೇಳಿದ್ದಾರೆ. . , , . ’ ’ . . ../pfzfq5s4mj45 ಸೆಕೆಂಡ್‌ಗಳ ಈ ಸಂದರ್ಶನದ ವಿಡಿಯೋ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ. ಅಂದಹಾಗೆ ಎರಡು ದಿನಗಳ ʼಮಾಸ್ಕೋ ಕಾಲಿಂಗ್‌ʼ ಇವೆಂಟ್‌ನಲ್ಲಿ ಚೀನಾ, ಭಾರತ, ಟರ್ಕಿ, ಗಲ್ಫ್ ದೇಶಗಳು, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.