ಭಾರತ-ಫ್ರಾನ್ಸ್ 25 ವರ್ಷಗಳ ಬಂಧವನ್ನು ಆಚರಿಸುತ್ತಿವೆ, ಪ್ರೀತಿಯ ಮೋದಿಯವರಿಗೆ...: ಹಿಂದಿಯಲ್ಲಿ ಸ್ವಾಗತ ಕೋರಿದ ಫ್ರಾನ್ಸ್ ಅಧ್ಯಕ್ಷ! ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಶುಕ್ರವಾರ ಹಿಂದಿಯಲ್ಲಿ ಬರೆದ ವಿಶೇಷ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡಿರುವ ಹೃದಯಸ್ಪರ್ಶಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ಯಾರಿಸ್: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಶುಕ್ರವಾರ ಹಿಂದಿಯಲ್ಲಿ ಬರೆದ ವಿಶೇಷ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡಿರುವ ಹೃದಯಸ್ಪರ್ಶಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತ-ಫ್ರಾನ್ಸ್ ಪಾಲುದಾರಿಕೆಯ 25ನೇ ವರ್ಷಾಚರಣೆ ಸಂದರ್ಭದಲ್ಲಿ ಅವರು ಟ್ವೀಟ್ ಮಾಡಿ, "ಭಾರತ ಮತ್ತು ಫ್ರಾನ್ಸ್ ನಡುವಿನ ರಾಷ್ಟ್ರಗಳ ಕಾರ್ಯತಂತ್ರದ ಪಾಲುದಾರಿಕೆ ವಿಶ್ವಾಸ ಮತ್ತು ಸ್ನೇಹದ ಆಚರಣೆ'' ಎಂದು ಕರೆದಿದ್ದಾರೆ. ಆತ್ಮೀಯ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಸ್ವಾಗತ" ಎಂದು ಮ್ಯಾಕ್ರೊನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಎರಡು ದಿನಗಳ ಮಹತ್ವದ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಪ್ಯಾರಿಸ್‌ಗೆ ಆಗಮಿಸಿದ್ದು, 26 ರಫೇಲ್ ಯುದ್ಧವಿಮಾನಗಳು ಮತ್ತು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ಒಪ್ಪಂದದ ಬಗ್ಗೆ ಅವರ ದ್ವಿಪಕ್ಷೀಯ ಮಾತುಕತೆಯಿರುತ್ತದೆ. ಇಂದು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದಾರೆ. भारत और फ्रांस 25 साल की रणनीतिक साझेदारी तथा विश्वास और दोस्ती के सदैव मजबूत बंधन का जश्न मना रहे हैं। प्रिय @, पैरिस में हार्दिक स्वागत! ../sUoSmdfnw8ಭಾರತೀಯ ಸೇನೆಗಳ ತ್ರಿ-ಸೇವೆಗಳ 269-ಸದಸ್ಯರ ತುಕಡಿ ಮತ್ತು 3 ರಫೇಲ್ ಜೆಟ್‌ಗಳು ಪರೇಡ್‌ನ ಮೇಲೆ ಫ್ಲೈಪಾಸ್ಟ್ ನ್ನು ಪ್ರದರ್ಶಿಸುತ್ತವೆ, ಇಂದಿನ ಕಾರ್ಯಕ್ರಮವು ಭಾರತಕ್ಕೆ ಹೆಚ್ಚಿನ ಮಹತ್ವದ್ದಾಗಿದೆ.ಇದನ್ನೂ ಓದಿ: ಭಾರತೀಯ ಪ್ರವಾಸಿಗರು ಇನ್ನು ಮುಂದೆ ಫ್ರಾನ್ಸ್‌ನಲ್ಲಿ ಯುಪಿಐ ಬಳಸಿ ಪಾವತಿಸಲು ಅವಕಾಶ: ಪ್ರಧಾನಿ ಮೋದಿ ಘೋಷಣೆನಿನ್ನೆ ಫ್ರಾನ್ಸ್ ತನ್ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವನ್ನು ಪ್ರಧಾನ ಮಂತ್ರಿ ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನ್ನು ನೀಡಿ ಗೌರವಿಸಿದೆ. ಇದಕ್ಕೆ ಫ್ರಾನ್ಸ್ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ, ಇದು ಭಾರತದ 140 ಕೋಟಿ ಜನರಿಗೆ ಗೌರವ ಎಂದು ಕರೆದಿದ್ದಾರೆ. ಪ್ಯಾರಿಸ್‌ನ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ನಿನ್ನೆ ಸಾಯಂಕಾಲ "ಭಾರತ್ ಮಾತಾ ಕಿ ಜೈ" ಘೋಷಣೆಗಳ ನಡುವೆ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿಯವರು ತಮ್ಮ ಭೇಟಿಯನ್ನು ಭಾರತ ಮತ್ತು ಫ್ರಾನ್ಸ್ ನಡುವಿನ ಅವಿನಾಭಾವ ಸ್ನೇಹದ ಪ್ರತಿಬಿಂಬ ಎಂದು ಕರೆದಿದ್ದಾರೆ.