ಅಮೇರಿಕಾದಲ್ಲಿ ಭಾರತೀಯ ಮೂಲದ ಶ್ರೀಮಂತ ಕುಟುಂಬದ ಎಲ್ಲಾ ಸದಸ್ಯರ ಸಾವು! ಅಮೇರಿಕಾದಲ್ಲಿ ಭಾರತೀಯ ಮೂಲದ ಶ್ರೀಮಂತ ಕುಟುಂಬದ ಎಲ್ಲಾ ಸದಸ್ಯರು ಸಾವನ್ನಪ್ಪಿದ್ದಾರೆ. ವಾಷಿಂಗ್ ಟನ್: ಅಮೇರಿಕಾದಲ್ಲಿ ಭಾರತೀಯ ಮೂಲದ ಶ್ರೀಮಂತ ಕುಟುಂಬದ ಎಲ್ಲಾ ಸದಸ್ಯರು ಸಾವನ್ನಪ್ಪಿದ್ದಾರೆ. ಯುಎಸ್ ನ ಮ್ಯಾಸಚೂಸೆಟ್ಸ್ ನಲ್ಲಿ ಈ ಘಟನೆ ವರದಿಯಾಗಿದ್ದು, 5 ಮಿಲಿಯನ್ ಡಾಲರ್ ಮೌಲ್ಯದ ಮ್ಯಾನ್ಶನ್ ನಲ್ಲಿ ಭಾರತೀಯ ಮೂಲದ ದಂಪತಿ ಹಾಗೂ ಅವರ ಮಗಳ ಶವ ಪತ್ತೆಯಾಗಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳ ವರದಿ ಮೂಲಕ ತಿಳಿದುಬಂದಿದೆ. ರಾಕೇಶ್ ಕಮಲ್ (57) ಅವರ ಪತ್ನಿ ಟೀನಾ (54) ಹಾಗೂ ಈ ದಂಪತಿಯ 18 ವರ್ಷದ ಅರಿಯಾನಾ ಮೃತ ವ್ಯಕ್ತಿಗಳಾಗಿದ್ದಾರೆ.ಇದನ್ನೂ ಓದಿ: ಚಿತ್ರದುರ್ಗ: ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ!ಡೋವರ್ ಮ್ಯಾಸಚೂಸೆಟ್ಸ್‌ನ ರಾಜಧಾನಿ ಬೋಸ್ಟನ್ ಡೌನ್‌ಟೌನ್‌ನಿಂದ ನೈಋತ್ಯಕ್ಕೆ 32 ಕಿಲೋಮೀಟರ್ ದೂರದಲ್ಲಿದೆ. ಟೀನಾ ಮತ್ತು ಅವರ ಪತಿ, ಈ ಹಿಂದೆ ಎಡುನೋವಾ ಎಂಬ ಈಗ ಸ್ಥಗಿತಗೊಂಡಿರುವ ಶಿಕ್ಷಣ ವ್ಯವಸ್ಥೆಗಳ ಕಂಪನಿಯನ್ನು ನಡೆಸುತ್ತಿದ್ದರು."ಭೀಕರ ದುರಂತ"ವನ್ನು "ಕೌಟುಂಬಿಕ ಹಿಂಸಾಚಾರದ ಪರಿಸ್ಥಿತಿಯಿಂದ ಉಂಟಾಗಿರುವ" ಘಟನೆ ಎಂದು ವಿವರಿಸಿದ ಸ್ಥಳೀಯ ಅಧಿಕಾರಿ, ರಾಕೇಶ್ ಕಮಲ್ ಶವದ ಬಳಿ ಬಂದೂಕು ಕಂಡುಬಂದಿದೆ ಎಂದು ಹೇಳಿದರು. ದಂಪತಿಗಳು ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಆನ್‌ಲೈನ್ ದಾಖಲೆಗಳು ತೋರಿಸುತ್ತವೆ. ಈ ಕುಟುಂಬದ ಸಂಬಂಧಿಕರು ಇವರನ್ನು ಭೇಟಿ ಮಾಡಲು ಇಲ್ಲಿಗೆ ಆಗಮಿಸಿದ್ದಾಗ ಶವಗಳು ಪತ್ತೆಯಾಗಿವೆ.