ಅಫ್ಘಾನಿಸ್ತಾನದಲ್ಲಿ ಮಾಧ್ಯಮಿಕ ಶಾಲೆಗೆ ಬಾಲಕಿಯರಿಗೆ, ಶಿಕ್ಷಕಿಯರಿಗೆ ಪ್ರವೇಶವಿಲ್ಲ, ಮಹಿಳಾ ಸಚಿವಾಲಯ ಬಂದ್ ಅಫ್ಘಾನಿಸ್ತಾನದ ಹೊಸ ತಾಲಿಬಾನ್ ಸರ್ಕಾರ ಮಾಧ್ಯಮಿಕ ಶಾಲೆಗಳನ್ನು ಪುನಾರಂಭ ಮಾಡಿದ್ದು, ವಿದ್ಯಾರ್ಥಿಗಳು(ಗಂಡು ಮಕ್ಕಳು) ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗುವಂತೆ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕಾಬೂಲ್: ಅಫ್ಘಾನಿಸ್ತಾನದ ಹೊಸ ತಾಲಿಬಾನ್ ಸರ್ಕಾರ ಮಾಧ್ಯಮಿಕ ಶಾಲೆಗಳನ್ನು ಪುನಾರಂಭ ಮಾಡಿದ್ದು, ವಿದ್ಯಾರ್ಥಿಗಳು(ಗಂಡು ಮಕ್ಕಳು) ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗುವಂತೆ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಶನಿವಾರದಿಂದಲೇ ಹುಡುಗರು ಮತ್ತು ಪುರುಷ ಶಿಕ್ಷಕರನ್ನು ಮಾತ್ರ ತರಗತಿಗೆ ಹಿಂತಿರುಗುವಂತೆ ತಾಬಿಲಾನ್ ಸರ್ಕಾರ ಸೂಚನೆ ನೀಡಿದೆ. ಅಫ್ಘಾನಿಸ್ತಾನದಲ್ಲಿ ಬಾಲಕಿಯರನ್ನು ಮಾಧ್ಯಮಿಕ ಶಾಲೆಗೆ ಮರಳುವುದರಿಂದ ಹೊರಗಿಡಲಾಗಿದೆ. ಕಠಿಣವಾದ ಇಸ್ಲಾಮಿಸ್ಟ್ ಗುಂಪು ಕಳೆದ ತಿಂಗಳು ಅಮೆರಿಕ ಬೆಂಬಲಿತ ಸರ್ಕಾರ ಕಿತ್ತುಹಾಕಿ ತಾಲಿಬಾನ್ ಅಧಿಕಾರಕ್ಕೆ ಬಂದಿದೆ. 1990ರ ದಶಕದಲ್ಲಿ ಮಹಿಳೆಯರಿಗೆ ಹೆಚ್ಚಾಗಿ ಶಿಕ್ಷಣ ಮತ್ತು ಕೆಲಸಕ್ಕೆ ನಿಷೇಧ ವಿಧಿಸಿದ್ದ ತಾಲಿಬಾನ್ ಈ ಬಾರಿ ಮಹಿಳೆಯರ ಬಗ್ಗೆ ಮೃದುವಾಗಿರುವುದಾಗಿ ಹೇಳಿಕೊಂಡಿತ್ತು. ಆದರೆ ತಾಲಿಬಾನ್ ಸರ್ಕಾರದ ಈ ಹೊಸ ಆದೇಶವು ಮಹಿಳಾ ಹಕ್ಕುಗಳಿಗೆ ಧಕ್ಕೆ ತರುವ ಹೊಸ ಸರ್ಕಾರದ ಇತ್ತೀಚಿನ ಕ್ರಮವಾಗಿದೆ.ಇದನ್ನು ಓದಿ: ಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ನಿಷೇಧ"ಎಲ್ಲಾ ಪುರುಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಈ ಆದೇಶದಲ್ಲಿ ಮಹಿಳಾ ಶಿಕ್ಷಕರು ಅಥವಾ ಬಾಲಕಿಯರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮಾಧ್ಯಮಿಕ ಶಾಲೆಗಳು, ಸಾಮಾನ್ಯವಾಗಿ 13 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ.ತಾಲಿಬಾನ್ ಸರ್ಕಾರ ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ಸ್ಥಗಿತಗೊಳಿಸಿದ್ದು, ಅದನ್ನು ತಮ್ಮ ಮೊದಲ ಆಳ್ವಿಕೆಯಲ್ಲಿ ಜಾರಿಯಲ್ಲಿದ್ದ ಕಟ್ಟುನಿಟ್ಟಾದ ಧಾರ್ಮಿಕ ಸಿದ್ಧಾಂತವನ್ನು ಜಾರಿಗೊಳಿಸುವ ಇಲಾಖೆಯನ್ನಾಗಿ ಬದಲಾಯಿಸಲಾಗಿದೆ.