: ರಸ್ತೆ ಅಪಘಾತದಲ್ಲಿ ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಸಾವು ಅಮೆರಿಕದ ಜಾರ್ಜಿಯಾದಲ್ಲಿ ವೇಗವಾಗಿ ಬಂದ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾದಲ್ಲಿ ವೇಗವಾಗಿ ಬಂದ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯ ಪೋಲೀಸರ ಪ್ರಕಾರ, ಅಲ್ಫರೆಟ್ಟಾದ ವೆಸ್ಟ್‌ಸೈಡ್ ಪಾರ್ಕ್‌ವೇಯಲ್ಲಿ ಕಳೆದ ವಾರ ಸಂಭವಿಸಿದ ಅಪಘಾತದಲ್ಲಿ ಭಾರತೀಯ ಮೂಲದ ಶ್ರೀಯಾ ಅವಸರಲಾ, ಅನ್ವಿ ಶರ್ಮಾ ಮತ್ತು ಆರ್ಯನ್ ಜೋಶಿ ಮೃತಪಟ್ಟಿದ್ದಾರೆ.ಘಟನಾ ಸ್ಥಳದ ಸಾಕ್ಷ್ಯಗಳದ ಆಧಾರದ ಮೇಲೆ, ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಇತರ ಮೂವರು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ನಾರ್ತ್ ಫುಲ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿದ್ದ ಅನ್ವಿ ಶರ್ಮಾ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಅಲ್ಫರೆಟ್ಟಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿ ವಿದ್ಯಾರ್ಥಿ ಮತ್ತು ವಾಹನದ ಚಾಲಕ ರಿತ್ವಾಕ್ ಸೋಮೆಪಲ್ಲಿ ಮತ್ತು ಅಲ್ಫರೆಟ್ಟಾ ಹೈಸ್ಕೂಲ್‌ನ ಮೊಹಮ್ಮದ್ ಲಿಯಾಕತ್ ಗಾಯಗೊಂಡ ಇತರ ಇಬ್ಬರು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಎಲ್ಲರೂ 18 ವರ್ಷ ವಯಸ್ಸಿನವರಾಗಿದ್ದಾರೆ.