ವಿವಾದಿತ ಸಾರ್ವತ್ರಿಕ ಚುನಾವಣೆಯ ನಂತರ ಪಾಕಿಸ್ತಾನದಲ್ಲಿ ಒಂದು ವಾರದಿಂದ 'ಎಕ್ಸ್'ಗೆ ನಿರ್ಬಂಧ ವಿವಾದಿತ ಸಾರ್ವತ್ರಿಕ ಚುನಾವಣೆಯ ನಂತರ ಪಾಕಿಸ್ತಾನದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ಗೆ ರಾಷ್ಟ್ರವ್ಯಾಪಿ ನಿರ್ಬಂಧ ವಿಧಿಸಿ ಶನಿವಾರ ಒಂದು ವಾರದ ಗಡಿ ದಾಟಿದೆ. ಇಸ್ಲಾಮಾಬಾದ್: ವಿವಾದಿತ ಸಾರ್ವತ್ರಿಕ ಚುನಾವಣೆಯ ನಂತರ ಪಾಕಿಸ್ತಾನದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ಗೆ ರಾಷ್ಟ್ರವ್ಯಾಪಿ ನಿರ್ಬಂಧ ವಿಧಿಸಿ ಶನಿವಾರ ಒಂದು ವಾರದ ಗಡಿ ದಾಟಿದೆ.ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿದ್ದ ಪ್ಲಾಟ್‌ಫಾರ್ಮ್ ಅನ್ನು ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ನಡೆದ ರಾಜಕೀಯ ಬೆಳವಣಿಗೆಗಳ ಬಳಿಕ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ನಂತರ ಕಳೆದ ಶನಿವಾರ ಸಾಮಾಜಿ ಮಾಧ್ಯಮಗಳನ್ನು ನಿರ್ಬಂಧಿಸಲಾಗಿತ್ತು.ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಮತ್ತು ಸರ್ಕಾರ ಅಧಿಕಾರಿಗಳು ಎಕ್ಸ್ ನಿರ್ಬಂಧಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ."ರಾಜಕೀಯ ಪಕ್ಷಗಳನ್ನು ಬಹಿರಂಗವಾಗಿ ಗುರಿಯಾಗಿಸುವುದನ್ನು ತಡೆಯಲು ಮತ್ತು ಚುನಾವಣಾ ಅಕ್ರಮಗಳ ವರದಿಯನ್ನು ತಡೆಯಲು" ನೆಟ್‌ವರ್ಕ್ ಸ್ಥಗಿತಗೊಳಿಸಲಾಗಿದೆ ಮತ್ತು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ನೆಟ್‌ಬ್ಲಾಕ್ಸ್ ವೆಬ್ ವಾಚ್‌ಡಾಗ್‌ನ ಆಲ್ಪ್ ಟೋಕರ್ ಅವರು ಎಎಫ್‌ಪಿಗೆ ತಿಳಿಸಿದ್ದಾರೆ.ಶನಿವಾರ ರಾಜಧಾನಿ ಇಸ್ಲಾಮಾಬಾದ್ ಮತ್ತು ಲಾಹೋರ್ ಮತ್ತು ಕರಾಚಿಯ ಮೆಗಾಸಿಟಿಗಳಲ್ಲಿ ಬಳಕೆದಾರರಿಗೆ ಲಭ್ಯವಾಗಿಲ್ಲ ಎಂದು ಸಿಬ್ಬಂದಿ ವರದಿ ಮಾಡಿದ್ದಾರೆ.