ಇಂಡಿಯಾನಾ ಮಾಲ್ ಶೂಟಿಂಗ್: ಅಮೆರಿಕಾದಲ್ಲಿ ಮೂವರು ಹತ್ಯೆ, ಪ್ರತ್ಯಕ್ಷದರ್ಶಿಯಿಂದ ಬಂದೂಕುಧಾರಿಯ ಕೊಲೆ ಇಂಡಿಯಾನಾ ಮಾಲ್ ನ ಫುಡ್ ಕೋರ್ಟ್ ನಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಮೂವರನ್ನು ಹತ್ಯೆ ಮಾಡಿದ ಬಳಿಕ ಶಸ್ತ್ರದಾರಿ ನಾಗರಿಕನೊಬ್ಬ ಆತನನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಇಬ್ಬರು ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಗ್ರೀನ್ ವುಡ್: ಇಂಡಿಯಾನಾ ಮಾಲ್ ನ ಫುಡ್ ಕೋರ್ಟ್ ನಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಮೂವರನ್ನು ಹತ್ಯೆ ಮಾಡಿದ ಬಳಿಕ ಶಸ್ತ್ರದಾರಿ ನಾಗರಿಕನೊಬ್ಬ ಆತನನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಇಬ್ಬರು ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ರೈಫಲ್ ಹಾಗೂ ಹಲವಾರು ಮ್ಯಾಗಜಿನ್ ಗಳೊಂದಿಗೆ ಫುಡ್ ಕೋರ್ಟ್ ಪ್ರವೇಶಿಸಿರುವ ವ್ಯಕ್ತಿ ಮನ ಬಂದಂತೆ ಗುಂಡಿನ ದಾಳಿ ನಡೆಸಿರುವುದಾಗಿ ಗ್ರೀನ್ ವುಡ್ ಪೊಲೀಸ್ ಇಲಾಖೆ ಮುಖ್ಯಸ್ಥ ಜಿಮ್ ಐಸಾನ್ ಹೇಳಿದ್ದಾರೆ. ಒಟ್ಟಾರೆ, ನಾಲ್ಕು ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ಸೊವೆಟೊ ನಗರದ ಬಾರ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ, 14 ಮಂದಿ ಸಾವುಅಧಿಕಾರಿಗಳು ಮಾಲ್ ನಲ್ಲಿ ಶೋಧಿಸಿದಾಗ ಫುಡ್ ಕೋರ್ಟ್ ನ ಬಾತ್ ರೂಂ ಬಳಿ ಅನುಮಾನಾಸ್ಪದ ಬ್ಯಾಕ್ ಪ್ಯಾಕ್ ಒಂದು ಪತ್ತೆಯಾಗಿದೆ. ಇಂಡಿಯಾನಾ ಪೊಲೀಸ್, ಮೆಟ್ರೋಪಾಲಿಟನ್ ಪೋಲಿಸ್ ಮತ್ತು ಅನೇಕ ಇತರ ಏಜೆನ್ಸಿಗಳು ತನಿಖೆಯಲ್ಲಿ ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.