ಪ್ರಕರಣ ಕೈಬಿಟ್ಟ ಕ್ರೆಮ್ಲಿನ್; ದಂಗೆ ನಿಲ್ಲಿಸಿ ಶಿಬಿರಗಳಿಗೆ ಮರಳಿ ಎಂದ ಪ್ರಿಗೋಝಿನ್‌; ಬೆಲಾರಸ್ ಅಧ್ಯಕ್ಷರ ಸಂಧಾನ ರಷ್ಯಾ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗಿನಿ ಪ್ರಿಗೋಝಿನ್‌ ತನ್ನ ವಿರುದ್ಧದ ಪ್ರಕರಣಗಳನ್ನುಕ್ರೆಮ್ಲಿನ್ ಕೈ ಬಿಡುವ ಭರವಸೆ ನೀಡಿದ ಬೆನ್ನಲ್ಲೇ ದಂಗೆಯನ್ನು ಹಿಂಪಡೆದಿದ್ದಾರೆ. ಮಾಸ್ಕೊ: ರಷ್ಯಾ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗಿನಿ ಪ್ರಿಗೋಝಿನ್‌ ತನ್ನ ವಿರುದ್ಧದ ಪ್ರಕರಣಗಳನ್ನುಕ್ರೆಮ್ಲಿನ್ ಕೈ ಬಿಡುವ ಭರವಸೆ ನೀಡಿದ ಬೆನ್ನಲ್ಲೇ ದಂಗೆಯನ್ನು ಹಿಂಪಡೆದಿದ್ದಾರೆ.‘ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ದಾಳಿ ನಿಲ್ಲಿಸಿ ಉಕ್ರೇನ್‌ನ ಸೇನಾ ಶಿಬಿರಗಳಿಗೆ ಮರಳುವಂತೆ ತಮ್ಮ ಪಡೆಗೆ ಆದೇಶಿಸಿದ್ದೇನೆ ಎಂದು ‘ವ್ಯಾಗ್ನರ್‌’ ನಾಯಕ ಪ್ರಿಗೋಷಿನ್‌ ತಿಳಿಸಿದ್ದಾರೆ.ಇದನ್ನೂ ಓದಿ: ರಷ್ಯಾ ಬಂಡಾಯ ಶಮನ: ಮಾಸ್ಕೋದತ್ತ ತೆರಳದಂತೆ ತನ್ನ ಸೈನಿಕರಿಗೆ ಆದೇಶಿಸಿದ ವ್ಯಾಗ್ನರ್ ಮುಖ್ಯಸ್ಥನಮ್ಮ ಯೋಧರು ಮಾಸ್ಕೊದಿಂದ ಕೇವಲ 200 ಕಿ.ಮೀ ದೂರದಲ್ಲಿರುವಾಗ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಪ್ರಿಗೋಜಿನ್‌ ತಿಳಿಸಿದ್ದು, ಆದರೆ, ರಷ್ಯಾ ತಮ್ಮ ಬೇಡಿಕೆಗಳಿಗೆ ಸಮ್ಮತಿಸಿದೆಯೇ ಎಂಬ ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ರಷ್ಯಾ ಸಹ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.‘ವ್ಯಾಗ್ನರ್‌ ದಾಳಿ ನಡೆಸಬಹುದೆಂದು ರಷ್ಯಾ ದಕ್ಷಿಣ ಭಾಗದಲ್ಲಿ ಚೆಕ್ ಪಾಯಿಂಟ್‌ಗಳನ್ನು ನಿರ್ಮಿಸಿ, ಶಸ್ತ್ರಸಜ್ಜಿತ ವಾಹನಗಳು ಮತ್ತು ಸೈನಿಕರನ್ನು ನಿಯೋಜಿಸಿ ಹೋರಾಟಕ್ಕೆ ಅಣಿಯಾಗಿತ್ತು. ಕೆಂಪು ಚೌಕದ ಕಟ್ಟಡವನ್ನು ಮುಚ್ಚಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸದಂತೆ ಮೇಯರ್ ಸೂಚಿಸಿದ್ದರು. ಆದರೆ ಇದೀಗ ಯೆವ್ಗಿನಿ ಪ್ರಿಗೋಝಿನ್‌ ತನ್ನ ವಿರುದ್ಧದ ಪ್ರಕರಣಗಳನ್ನುಕ್ರೆಮ್ಲಿನ್ ಕೈ ಬಿಡುವ ಭರವಸೆ ನೀಡಿದ ಬೆನ್ನಲ್ಲೇ ದಂಗೆಯನ್ನು ಹಿಂಪಡೆದಿದ್ದಾರೆ.ಇದನ್ನೂ ಓದಿ: ರಷ್ಯಾ ಆಂತರಿಕ ದಂಗೆ: ವ್ಯಾಗ್ನರ್‌ ಮುಖ್ಯಸ್ಥನ ಬಂಧನಕ್ಕೆ ಆದೇಶ; ಇಷ್ಟಕ್ಕೂ ಪುಟಿನ್ ಪರಮಾಪ್ತ ಪ್ರಿಗೊಜಿನ್ ಬಂಡಾಯವೆದ್ದಿದ್ದೇಕೆ?ಘೋಷಣೆಯು ರಷ್ಯಾದಲ್ಲಿ ಉದ್ಭವಿಸಿದ ಹಠಾತ್‌ ಬಿಕ್ಕಟ್ಟು ಶಮನಗೊಳ್ಳುವ ಸಾಧ್ಯತೆ ದಟ್ಟವಾಗಿಸಿದೆ.ಬೆಲಾರಸ್ ಅಧ್ಯಕ್ಷರ ಸಂಧಾನ ಯಶಸ್ವಿ ಇನ್ನು ಕ್ರೆಮ್ಲಿನ್ ಮತ್ತು ಪ್ರಿಗೋಜಿನ್ ನಡುವೆ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಧ್ಯಸ್ಥಿಕೆ ವಹಿಸಿ ವ್ಯಾಗ್ನರ್ ಹೋರಾಟಗಾರರನ್ನು ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. ನಿಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಕೈ ಬಿಡುತ್ತೇವೆ ಎಂಬ ಭರವಸೆ ಮೇರೆಗೆ ಪ್ರಿಗೋಝಿನ್ ದಂಗೆಯನ್ನು ಹಿಂದಕ್ಕೆ ಪಡೆದಿದ್ದಾರೆ.