ಮಾಧ್ಯಮ ಮಾಲೀಕ ಮೊಗಲ್ ರೂಪರ್ಟ್ ಮುರ್ಡೋಕ್ 92ನೇ ವಯಸ್ಸಿನಲ್ಲಿ 5ನೇ ಮದುವೆ; ಗರ್ಲ್ ಫ್ರೆಂಡ್ ಎಲೆನಾ ಝುಕೋವಾಗೆ 67 ವರ್ಷ! ಆಸ್ಟ್ರೇಲಿಯನ್ ಮೂಲದ ಅಮೇರಿಕನ್ ಉದ್ಯಮಿ, ಹೂಡಿಕೆದಾರ ಮತ್ತು ಮಾಧ್ಯಮ ಮಾಲೀಕ ಮೊಗಲ್ ರೂಪರ್ಟ್ ಮುರ್ಡೋಕ್ ನ್ಯೂಯಾರ್ಕ್: ಆಸ್ಟ್ರೇಲಿಯನ್ ಮೂಲದ ಅಮೇರಿಕನ್ ಉದ್ಯಮಿ, ಹೂಡಿಕೆದಾರ ಮತ್ತು ಮಾಧ್ಯಮ ಮಾಲೀಕ ಮೊಗಲ್ ರೂಪರ್ಟ್ ಮುರ್ಡೋಕ್ ಅವರು ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞೆ 67 ವರ್ಷದ ಎಲೆನಾ ಝುಕೋವಾ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಪ್ರಕಾರ, 92 ವರ್ಷದ ಮೊಗಲ್ ರೂಪರ್ಟ್ ಮುರ್ಡೋಕ್ ಅವರು ಜೂನ್ 1 ರಂದು ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಝುಕೋವಾ ಅವರನ್ನು ವಿವಾಹವಾಗಲಿದ್ದಾರೆ.ಇಲ್ಲಿ ಆಸಕ್ತಿಕರ ವಿಚಾರವೆಂದರೆ ಮುರ್ಡೋಕ್ ಅವರು ತನ್ನ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ಝುಕೋವಾರನ್ನು ಬೇಸಿಗೆಯಲ್ಲಿ ಭೇಟಿಯಾಗಿ ಪರಿಚಯವಾಗಿದ್ದರು. ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಧುಮೇಹ ಬಗ್ಗೆ ಅಧ್ಯಯನ ಮಾಡಿದ ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞೆ ಎಲೆನಾ ಝುಕೋವಾ ಆಗಿದ್ದಾರೆ.ಇವರಿಬ್ಬರ ನಿಶ್ಚಿತಾರ್ಥ ವಿಚಾರವನ್ನು ಮೊದಲು ವರದಿ ಮಾಡಿದ್ದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ. ದಿ ಹಾಲಿವುಡ್ ರಿಪೋರ್ಟರ್ ಪ್ರಕಾರ, ಮುರ್ಡೋಕ್ ಅವರು ಕಳೆದ ಚಳಿಗಾಲದಲ್ಲಿ ನಿವೃತ್ತ ದಂತ ನೈರ್ಮಲ್ಯ ತಜ್ಞೆ ಆನ್ ಲೆಸ್ಲಿ ಸ್ಮಿತ್ ಅವರೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಆದರೆ ಅದು ಕೆಲವೇ ವಾರಗಳಲ್ಲಿ ಮುರಿದುಬಿತ್ತು.ಮುರ್ಡೋಕ್ ಅವರಿಗೆ ಇದು ಐದನೇ ಮದುವೆಯಾಗಿದೆ. ಈ ಹಿಂದೆ 2016 ರಲ್ಲಿ ಮಾಡೆಲ್ ಜೆರ್ರಿ ಹಾಲ್ ಅವರನ್ನು ವಿವಾಹವಾಗಿ 2022 ರವರೆಗೆ ಸಂಬಂಧ ಹೊಂದಿದ್ದರು.