ಕೊರೊನಾ ಮಾರ್ಗಸೂಚಿ ಸಡಿಲಿಕೆ, ಪಾನಮತ್ತರಾಗಿ ಬೀದಿಗಳಲ್ಲಿ ಸಂಭ್ರಮಾಚರಣೆಗಿಳಿದ ನಾಗರಿಕರಿಂದ ಗೂಂಡಾ ಪ್ರವೃತ್ತಿ: ಹಲವೆಡೆ ಗುಂಪು ಘರ್ಷಣೆ ಮನೆಗಳಲ್ಲಿ ಕೂತು ಬೋರು ಹೊಡೆದಿದ್ದ ನಾರ್ವೆ ಜನತೆ ರಾತ್ರಿ ನೈಟ್ ಕ್ಲಬ್ಬುಗಳಲ್ಲಿ ಕಂಠಪೂರ್ತಿ ಕುಡಿದು ಸಂಭ್ರಮಾಚರಣೆ ನಡೆಸಿದೆ. ಇದೇ ವೇಳೆ ಹಲವೆಡೆ ಗುಂಪು ಘರ್ಷಣೆಗಳು ಸಂಭವಿರುವ ಬಗ್ಗೆ ವರದಿಯಾಗಿದೆ. ಒಂದೇ ರಾತ್ರಿಯಲ್ಲಿ 50 ದೂರುಗಳು ದಾಖಲಾಗಿರುವುದು ಪೊಲಿಸರಿಗೆ ತಲೆನೋವಾಗಿ ಪರಿಣಮಿಸಿದೆ. ಒಸ್ಲೊ: ನಾರ್ವೆ ದೇಶದಲ್ಲಿ ದೀರ್ಘಕಾಲದಿಂದ ಹೇರಲಾಗಿದ್ದ ಲಾಕ್ ಡೌನ್ ನಿರ್ಬಂಧ, ಕೊರೊನಾ ಮಾರ್ಗಸೂಚಿಗಳನ್ನು ಸರ್ಕಾರ ಸಡಿಲಿಸಿತ್ತು. ಮನೆಗಳಲ್ಲಿ ಕೂತು ಬೋರು ಹೊಡೆದಿದ್ದ ಜನತೆ ರಾತ್ರಿ ನೈಟ್ ಕ್ಲಬ್ಬುಗಳಲ್ಲಿ ಕಂಠಪೂರ್ತಿ ಕುಡಿದು ಸಂಭ್ರಮಾಚರಣೆ ನಡೆಸಿದೆ. ಇದೇ ವೇಳೆ ಹಲವೆಡೆ ಗುಂಪು ಘರ್ಷಣೆಗಳು ಸಂಭವಿರುವ ಬಗ್ಗೆ ವರದಿಯಾಗಿದೆ. ಒಂದೇ ರಾತ್ರಿಯಲ್ಲಿ 50 ದೂರುಗಳು ದಾಖಲಾಗಿರುವುದು ಪೊಲಿಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಸಾಂಕ್ರಾಮಿಕ ರೋಗಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ; ಇಂಡೊ-ಫೆಸಿಫಿಕ್ ಪ್ರದೇಶದಲ್ಲಿ ಆರೋಗ್ಯ, ಭದ್ರತೆಗೆ ಇನ್ನಷ್ಟು ಪ್ರಯತ್ನ: ಕ್ವಾಡ್ ನಾಯಕರುಶನಿವಾರ ಮಧ್ಯಾಹ್ನದ ವೇಳೆಗೆ ಪ್ರಧಾನಿ ಎರ್ನಾ ಸೊಲ್ಬರ್ಗ್ ಅವರು ಕೊರೊನಾ ನಿರ್ಬಂಧ ಸಡಿಲಿಸುತ್ತಿರುವುದಾಗಿ ಘೋಷಣೆ ಮಾಡಿದ್ದರು. ಆ ಕ್ಷಣದಿಂದಲೇ ನಾಗರಿಕರ ಗೂಂಡಾ ವರ್ತನೆ ಗರಿಗೆದರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜನರು ಹುಚ್ಚು ಬಂದಂತೆ ಸಂಭ್ರಮಾಚರಣೆಯಲ್ಲಿ ತೊಡಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡಿದ್ದಾರೆ.ಇದನ್ನೂ ಓದಿ: ಜಾಗತಿಕವಾಗಿ ಹೊಸ ಕೊರೋನಾ ಪ್ರಕರಣಗಳಲ್ಲಿ ಭಾರಿ ಕುಸಿತ: ಡಬ್ಲ್ಯುಎಚ್ಒದೇಶದೆಲ್ಲೆಡೆ ಈ ಪರಿಸ್ಥಿತಿ ಕಂಡುಬಂದಿದ್ದರೂ ರಾಜಧಾನಿ ಒಸ್ಲೋನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೈಟ್ ಕ್ಲಬ್ ಓದರ್ ಒಬ್ಬ ಹೀಗಾಗುತ್ತದೆ ಎಂದು ನನಗೆ ಮುಂಚೆಯೇ ತಿಳಿದಿತ್ತು ಎಂಡು ಹೇಳಿದ್ದಾನೆ. ಒಂದೇ ಬಾರಿಗೆ ಎಲ್ಲಾ ಮಾರ್ಗಸೂಚಿಯನ್ನು ತೆಗೆಯುವುದಕ್ಕೆ ಬದಲಾಗಿ ಹಂತ ಹಂತವಾಗಿ ಲಾಕ್ ಡೌನ್ ನಿರ್ಬಂಧ ತೆಗೆಯಬೇಕಿತ್ತು ಎಂಡು ಹಲವರು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.ಇದನ್ನೂ ಓದಿ: ದಕ್ಷಿಣ ಕೊರಿಯ ನಮಗೆ ಮರ್ಯಾದೆ ಕೊಟ್ಟರೆ ಮಾತ್ರ ಮಾತುಕತೆ: ಉ.ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಸಹೋದರಿಸೆ. 28ಕ್ಕೆ ಇಂದಿರಾ ನೂಯಿ ಜೀವನದ ಮೇಲೆ ಬೆಳಕು ಚೆಲ್ಲುವ ಪುಸ್ತಕ ಬಿಡುಗಡೆ; 2009ರ ಘಟನೆ ಮೆಲಕು!12 ಹಾಗೂ ಮೇಲ್ಪಟ್ಟವರಿಗೆ ನೀಡಬಹುದಾದ ಡಿಎನ್ಎ ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಯುಎನ್ ಜಿಎಯಲ್ಲಿ ಪ್ರಧಾನಿ ಮೋದಿಬೆಂಕಿ ಆರಿಸುವ ಸೋಗಿನಲ್ಲಿ ಪಾಕಿಸ್ತಾನ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ ಕಟುಟೀಕೆಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ-ಅಮೆರಿಕ ಜಂಟಿಯಾಗಿ ಖಂಡನೆ; 26/11 ದಾಳಿಯ ಅಪರಾಧಿಗಳಿಗೆ ಶಿಕ್ಷೆ ನೀಡಲು ಕರೆ