ಅಮಾನವೀಯ ದೃಶ್ಯ: ಅಮೆರಿಕದಲ್ಲಿ ಮೃತ ವ್ಯಕ್ತಿಯ ಕಾಲು ಕಿತ್ತು ತಿಂದ ಯುವಕ, ವಿಡಿಯೋ ವೈರಲ್! ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ತುಂಡರಿಸಿದ ಕಾಲನ್ನು ಕಿತ್ತು ತಿಂದಿದ್ದಕ್ಕಾಗಿ ಕ್ಯಾಲಿಫೋರ್ನಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾಸ್ ಏಂಜಲೀಸ್: ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ತುಂಡರಿಸಿದ ಕಾಲನ್ನು ಕಿತ್ತು ತಿಂದಿದ್ದಕ್ಕಾಗಿ ಕ್ಯಾಲಿಫೋರ್ನಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಪೊಲೀಸರು ಪ್ರಕಾರ, ಬೇಕರ್ಸ್‌ಫೀಲ್ಡ್‌ನ ಪಶ್ಚಿಮದಲ್ಲಿರುವ ವಾಸ್ಕೋದಲ್ಲಿರುವ ಆಮ್‌ಟ್ರಾಕ್ ನಿಲ್ದಾಣದ ಹಳಿ ಮೇಲಿದ್ದ ಮೃತ ವ್ಯಕ್ತಿಯ ಕಾಲನ್ನು 27 ವರ್ಷದ ರೆಸೆಂಡೋ ಟೆಲ್ಲೆಜ್ ತಿಂದಿದ್ದನು. ಬೆಳಗ್ಗೆ 8 ಗಂಟೆ ಸುಮಾರಿಗೆ ಆ ವ್ಯಕ್ತಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದನು.ರೈಲು ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು ಅಪಘಾತದ ಬಳಿಕ ಆತನ ಕಾಲು ತುಂಡಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. : . , . , 27-- . … ../Wv0npYZUmPಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಟೆಲ್ಲೆಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ