ಕೈಲಾಗದ ಪ್ರಯಾಣಿಕರ ಸಮ್ಮುಖದಲ್ಲೇ ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರ: ಅಮೆರಿಕದಲ್ಲಿ ನಡೆದ ಮಾನಗೇಡಿ ಘಟನೆ ತಮ್ಮ ಆಧುನಿಕ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಕಂಡು ಶಾಕ್ ಆಗುತ್ತಿದೆ ಎಂದು ಪೊಲೀಸರು ಸಂತಾಪ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್: ಅಪರಿಚಿತನೋರ್ವ ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪ್ರಯಾಣಿಕಳೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಎಲ್ಲಕ್ಕಿಂತ ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ ಇತರೆ ಪ್ರಯಾಣಿಕರ ಸಮ್ಮುಖದಲ್ಲೇ ಅತ್ಯಾಚಾರ ನಡೆದಿದ್ದರೂ ಯಾರೊಬ್ಬರೂ ಮಹಿಳೆಯ ಸಹಾಯಕ್ಕೆ ಧಾವಿಸದೇ ಇದ್ದುದು. ಈ ಬಗ್ಗೆ ಪೊಲಿಸರು ಕೂಡಾ ಖೇದ ವ್ಯಕ್ತಪಡಿಸಿದ್ದು, ಯಾರಾದರೂ ಪ್ರಯಾಣಿಕರು ಇದನ್ನು ತಡೆಯಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: 17 ವರ್ಷದ ಯುವತಿ ಮೇಲೆ ಅತ್ಯಾಚಾರ: ಎಸ್ ಪಿ, ಬಿಎಸ್ ಪಿ ಜಿಲ್ಲಾಧ್ಯಕ್ಷ ಸೇರಿ ಏಳು ಮಂದಿ ಬಂಧನಅಮೆರಿಕದ ಅಪ್ಪರ್ ಡರ್ಬಿ ಎನ್ನುವ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ವರದಿಯಾಗಿದೆ. ಅಸ್ವಸ್ಥ ಮಹಿಳೆಯೋರ್ವಳು ಪೆನ್ಸಿಲ್ವೇನಿಯ ರೈಲ್ವೇ ವಿಭಾಗದ ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದಳು. ಆಕೆಯನ್ನು ವಿಚಾರಿಸಲಾಗಿ ಸಂಪೂರ್ಣ ಘಟನೆ ಬೆಳಕಿಗೆ ಬಂದಿದೆ. ರೈಲ್ವೇ ಪೊಲಿಸರು ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ದಕ್ಷಿಣ ಕನ್ನಡ: ಎಂಡೋಸಲ್ಫಾನ್ ಪೀಡಿತನೊಂದಿಗೆ ಬಲವಂತದ ಅಸಹಜ ಲೈಂಗಿಕ ಕ್ರಿಯೆ; ವ್ಯಕ್ತಿ ಬಂಧನಸಂಪೂರ್ಣ ಘಟನೆಯ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಅದರಲ್ಲಿ ಅಕ್ಕಪಕ್ಕದ ಜನರು ಅತ್ಯಾಚಾರ ನಡೆಯುತ್ತಿದ್ದರೂ ಸಹಾಯಕ್ಕೆ ಧಾವಿಸದೆ ತಮ್ಮ ಪಾಡಿಗೆ ತಾವಿರುವುದು ದಾಖಲಾಗಿದೆ. ಇದನ್ನು ಕಂಡು ರೈಲ್ವೇ ಪೊಲಿಸರು ಆಘಾತಗೊಂಡಿದ್ದಾರೆ. ತಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಕಂಡು ಶಾಕ್ ಆಗುತ್ತಿದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.ಪುರುಷರೇನು ರೋಬೋಟ್ಗಳಲ್ಲ.. ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದೇ ಅತ್ಯಾಚಾರ ಹೆಚ್ಚಲು ಕಾರಣ: ಇಮ್ರಾನ್ ಖಾನ್ನವದೆಹಲಿ: ಕಿರಿಯ ಸಹೋದ್ಯೋಗಿ ಮೇಲೆ ಅತ್ಯಾಚಾರ, ಏಮ್ಸ್ ಡಾಕ್ಟರ್ ವಿರುದ್ದ ಕೇಸ್ ದಾಖಲುಲಕ್ನೊ-ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆಕೋರರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಏಳು ಮಂದಿ ಬಂಧನಶಾಲೆಗೆ ಹೋಗುತ್ತಿದ್ದ ಬಾಲಕಿ ಅಪಹರಣ; ಐದು ಜನರಿಂದ ಸಾಮೂಹಿಕ ಅತ್ಯಾಚಾರ, ಬಂಟ್ವಾಳ ಪೊಲೀಸರಿಂದ 'ಪೋಕ್ಸೊ' ಅಡಿ ಪ್ರಕರಣ ದಾಖಲುಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ರದ್ಧುಗೊಳಿಸಿದ ಕರ್ನಾಟಕ ಹೈಕೋರ್ಟ್ಅತ್ಯಾಚಾರಿಗಳ ಅಂಗಾಂಗ ಕತ್ತರಿಸುವ ಕಾನೂನನ್ನು ಭಾರತದಲ್ಲಿ ತರಲು ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ