: ಗಾಜಾ ಮೇಲೆ ಇಸ್ರೇಲ್ ದಾಳಿ ಕುರಿತು ವಿಶ್ವಸಂಸ್ಥೆ ಮತದಾನ; 'ಹಮಾಸ್ ದಾಳಿ ಉಲ್ಲೇಖ ಇಲ್ಲ' ಎಂದು ಭಾರತ ಗೈರು! ಹಮಾಸ್ ದಾಳಿ ಉಲ್ಲೇಖಸಿದ ಕಾರಣ ಗಾಜಾ ಮೇಲೆ ಇಸ್ರೇಲ್ ದಾಳಿ ಕುರಿತ ವಿಶ್ವಸಂಸ್ಥೆ ಮತದಾನದಿಂದ ಭಾರತ ಗೈರಾಗಿದೆ ಎಂದು ತಿಳಿದುಬಂದಿದೆ. ನ್ಯೂಯಾರ್ಕ್: ಹಮಾಸ್ ದಾಳಿ ಉಲ್ಲೇಖಸಿದ ಕಾರಣ ಗಾಜಾ ಮೇಲೆ ಇಸ್ರೇಲ್ ದಾಳಿ ಕುರಿತ ವಿಶ್ವಸಂಸ್ಥೆ ಮತದಾನದಿಂದ ಭಾರತ ಗೈರಾಗಿದೆ ಎಂದು ತಿಳಿದುಬಂದಿದೆ.ಹೌದು.. ಇಸ್ರೇಲ್-ಹಮಾಸ್ ಸಂಘರ್ಷ(- )ಕ್ಕೆ ಸಂಬಂಧಪಟ್ಟಂತೆ ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ವಿಶ್ವಸಂಸ್ಥೆಯ ಮಹಾಸಭೆ ( )ಯ ನಿರ್ಣಯದಿಂದ ಭಾರತ () ಹೊರಗುಳಿದಿದ್ದು, ನಿರ್ಣಯದಲ್ಲಿ ಇಸ್ರೇಲ್ () ಮೇಲಿನ ಹಮಾಸ್ () ದಾಳಿ ಉಲ್ಲೇಖ ಇಲ್ಲ. ಭಯೋತ್ಪಾದಕ ಕೃತ್ಯ( )ಗಳನ್ನು ಜಗತ್ತು ಸಮರ್ಥಿಸಿಕೊಳ್ಳಬಾರದು ಎಂದು ಅದು ತಿಳಿಸಿದೆ.ಇದನ್ನೂ ಓದಿ: ಗಾಜಾ ಮೇಲೆ ಭಾರೀ ವಾಯುದಾಳಿ: ಇಂಟರ್ ನೆಟ್, ಮೊಬೈಲ್ ಸೇವೆ ಸ್ಥಗಿತ, ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದ ಇಸ್ರೇಲ್‘ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಯನ್ನು ಎತ್ತಿಹಿಡಿಯುವುದು’ ಎಂಬ ಘೋಷ ವಾಕ್ಯದೊಂದಿಗೆ ಶುಕ್ರವಾರ ವಿಶ್ವಸಂಸ್ಥೆಯು ಜೋರ್ಡಾನ್ ಕರಡು ನಿರ್ಣಯ (- ) ಪ್ರಕಟಿಸಿದ್ದು, ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ನಿರ್ಧಾರಕ್ಕೆ ಸದಸ್ಯ ರಾಷ್ಟ್ರಗಳ ಒಪ್ಪಿಗೆಗೆ ಯಾಚಿಸಿತ್ತು. ವಿಶ್ವಸಂಸ್ಥೆಯ ಈ ನಿರ್ಣಯಕ್ಕೆ 121 ಸದಸ್ಯ ರಾಷ್ಟ್ರಗಳು ಸಮ್ಮತಿಸಿದರೆ, 14 ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದ್ದವು. 44 ದೇಶಗಳು ಈ ನಿರ್ಣಯದಿಂದ ಹೊರಗುಳಿದಿದ್ದು, ಅದರಲ್ಲಿ ಭಾರತ ಕೂಡ ಒಂದಾಗಿದೆ.ಭಾರತದ ನಿರ್ಧಾರದ ಕುರಿತಂತೆ ಮಾತನಾಡಿರುವ ವಿಶ್ವಸಂಸ್ಥೆ ರಾಯಭಾರ ಕಚೇರಿಗೆ ಭಾರತದ ಸಹಾಯಕ ಕಾಯಂ ಪ್ರತಿನಿಧಿ ಯೋಜ್ನಾ ಪಟೇಲ್‌ ( ), ‘ಮಾನವೀಯತೆಗೆ ಭಯೋತ್ಪಾದನೆ ಒಂದು ಪಿಡುಗಾಗಿದ್ದು, ಅದಕ್ಕೆ ಯಾವುದೇ ಗಡಿ, ರಾಷ್ಟ್ರೀಯತೆ, ಜನಾಂಗದ ಮಿತಿಯಿಲ್ಲ. ಭಯೋತ್ಪಾದಕ ಕೃತ್ಯಗಳನ್ನು ಜಗತ್ತು ಸಮರ್ಥಿಸಿಕೊಳ್ಳಬಾರದು. ಈ ವಿಷಯದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವೆಲ್ಲ ಒಂದಾಗಬೇಕಿದೆ. ಭಯೋತ್ಪಾದನೆ () ವಿಚಾರವಾಗಿ ಶೂನ್ಯ ಸಹಿಷ್ಣುತೆಯನ್ನು ಹೊಂದಬೇಕಿದೆ’ ಎಂದರು.ಇದನ್ನೂ ಓದಿ: ಹಮಾಸ್ ನಿರ್ನಾಮಕ್ಕೆ ಗಾಜಾ ಪ್ರವೇಶಿಸಿದ ಇಸ್ರೇಲ್ ಸೇನೆ: ವೈಮಾನಿಕ ದಾಳಿ 3 ಪ್ರಮುಖ ಭಯೋತ್ಪಾದಕರು ಹತ!ಇನ್ನು ಗಾಜಾ ಪಟ್ಟಿಗೆ ಮಾನವೀಯ ನೆಲೆಯಲ್ಲಿ ಅನಿರ್ಬಂಧಿತವಾಗಿ ನೆರವು ಮುಂದುವರಿಸಬೇಕೆಂಬ ಬಗ್ಗೆ ನಿರ್ಣಯದಲ್ಲಿ ಒತ್ತಿ ಹೇಳಲಾಗಿದೆ.ಕೆನಡಾ () ಪ್ರಸ್ತಾಪಿಸಿದ ತಿದ್ದುಪಡಿಯನ್ನು ನಿರ್ಣಯದಲ್ಲಿ ಸೇರಿಸಲು ಕೇಳಿದೆ. ಅದು ಸಾಮಾನ್ಯ ಸಭೆಯು "ಅಕ್ಟೋಬರ್ 7, 2023 ರಿಂದ ಇಸ್ರೇಲ್‌ನಲ್ಲಿ ನಡೆದ ಹಮಾಸ್‌ನ ಭಯೋತ್ಪಾದಕ ದಾಳಿಯನ್ನು ನಿಸ್ಸಂದಿಗ್ಧವಾಗಿ ತಿರಸ್ಕರಿಸುತ್ತದೆ ಮತ್ತು ಖಂಡಿಸುತ್ತದೆ ಮತ್ತು ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ಕೋರುತ್ತದೆ. ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಒತ್ತೆಯಾಳುಗಳ ಯೋಗಕ್ಷೇಮ ಮತ್ತು ಮಾನವೀಯ ಚಿಕಿತ್ಸೆ, ಮತ್ತು ಅವರ ತಕ್ಷಣದ ಮತ್ತು ಬೇಷರತ್ತಾದ ಬಿಡುಗಡೆಗೆ ಕರೆ ನೀಡುತ್ತದೆ ಎಂದು ಹೇಳಿದೆ.