ರಷ್ಯಾದಲ್ಲಿ ವಿಮಾನ ಪತನ: ಕನಿಷ್ಠ 16 ಮಂದಿ ಸಾವು ಶಂಕೆ ರಷ್ಯಾದಲ್ಲಿ 23 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎನ್ನಲಾಗಿದೆ. ಮಾಸ್ಕೋ: ರಷ್ಯಾದಲ್ಲಿ 23 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎನ್ನಲಾಗಿದೆ.ರಷ್ಯಾದ ಟಾಟರ್ಸ್ತಾನ್ ಪ್ರಾಂತ್ಯದ ಯಮನ್ಝೆಲಿನ್ಸ್ಕ್ ನಲ್ಲಿ ಈ ಘಟನೆ ನಡೆದಿದ್ದು, 21 ಮಂದಿ ಪ್ಯಾರಾಶೂಟ್ ಡೈವರ್ ಗಳು ಸೇರಿದಂತೆ ಒಟ್ಟು 23 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.ಈ ಬಗ್ಗೆ ರಷ್ಯಾದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, 23 ಮಂದಿಯ ಪೈಕಿ 7 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. 23 21 , . 7 23 :