Gazaದಲ್ಲಿ ಕೈಕೊಟ್ಟ ಪ್ಯಾರಾಶೂಟ್: ವಿಮಾನದಿಂದ ಆಹಾರ ಪದಾರ್ಥಗಳ ಪಾರ್ಸೆಲ್ ಬಿದ್ದು 5 ಮಂದಿ ಸಾವು, ಹಲವರಿಗೆ ಗಾಯ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಗಾಜಾಪಟ್ಟಿಯಲ್ಲಿ ನಿರಾಶ್ರಿತರ ನೆರವಿಗೆ ವಿಮಾನದಲ್ಲಿ ರವಾನಿಸಿದ ಆಹಾರ ಪದಾರ್ಥಗಳೇ ಅಲ್ಲಿ ಹಲವರ ಸಾವಿಗೆ ಕಾರಣವಾಗಿದೆ. ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಗಾಜಾಪಟ್ಟಿಯಲ್ಲಿ ನಿರಾಶ್ರಿತರ ನೆರವಿಗೆ ವಿಮಾನದಲ್ಲಿ ರವಾನಿಸಿದ ಆಹಾರ ಪದಾರ್ಥಗಳೇ ಅಲ್ಲಿ ಹಲವರ ಸಾವಿಗೆ ಕಾರಣವಾಗಿದೆ.ಅಚ್ಚರಿಯಾದರೂ ಇದು ಸತ್ಯ... ಗಾಜಾಪಟ್ಟಿಯ ಯುದ್ಧ ಪೀಡಿತ ಪ್ರದೇಶಗಳಲ್ಲಿರು ನಿರಾಶ್ರಿತರಿಗೆ ವಿಮಾನದ ಮೂಲಕ ರವಾನಿಸಿದ ಆಹಾರ ಪದಾರ್ಥಗಳನ್ನು ಮೇಲೆ ಬಿದ್ದು ಅಲ್ಲಿನ ಹಲವರು ಸಾವಗೀಡಾಗಿದ್ದಾರೆ. ಅಹಾರ ಮತ್ತು ಇತರೆ ಅಗತ್ಯವಸ್ತುಗಳಿದ್ದ ಪಾರ್ಸೆಲ್ ನ ಪ್ಯಾರಾಚೂಟ್ ತೆರೆಯುವಲ್ಲಿ ವಿಫಲವಾಗಿದ್ದು, ಈ ವೇಳೆ ಅದು ನೇರವಾಗಿ ಜನ ವಸತಿ ಪ್ರದೇಶದ ಮೇಲೆ ಬಿದ್ದಿದೆ. ಗಾಜಾಪಟ್ಟಿಯ ನಿರಾಶ್ರಿತ ಮಹಿಳೆಯರು ಮತ್ತು ಪುರುಷರು ಅದರಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.ಮೂಲಗಳ ಪ್ರಕಾರ ಮಕ್ಕಳು ಸೇರಿದಂತೆ ಈ ದುರಂತದಲ್ಲಿ 5 ಮಂದಿ ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡ ಪಾರ್ಸೆಲ್ ಅಲ್-ಶಾತಿ ನಿರಾಶ್ರಿತರ ಶಿಬಿರದ ಸಮೀಪವಿರುವ ಮನೆಯ ಛಾವಣಿಯ ಮೇಲೆ ರಾಕೆಟ್‌ನಂತೆ ಬಿದ್ದಿದೆ. ಈ ವೇಳೆ ಭಾರವಾದ ಈ ಪಾರ್ಸೆಲ್ ಅದರ ಕೆಳಗೆ ಇದ್ದ ಜನರ ಮೇಲೆ ಬಿದ್ದಿದ್ದು ಅದರ ಭಾರಕ್ಕೆ ಹಲವರು ಸಾವನ್ನಪ್ಪಿದ್ದಾರೆ.ಅಪಘಾತದ ಸಂತ್ರಸ್ತರನ್ನು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಗಾರ್ಡಿಯನ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ., -17A # # ! ../5ew8Go8l5Kಈಗಾಗಲೇ ಇಸ್ರೇಲಿ-ವೈಮಾನಿಕ ದಾಳಿಯಿಂದಾಗಿ ಈ ಆಶ್ರಯ ಶಿಬಿರವು ಗಾಜಾದ ಅತ್ಯಂತ ಕೆಟ್ಟ ಪೀಡಿತ ಭಾಗಗಳಲ್ಲಿ ಒಂದಾಗಿದ್ದು, ಹಾಲಿ ದುರಂತ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಸ್ರೇಲ್-ಹಮಾಸ್ ಯುದ್ಧ ಮುಂದುವರಿದಂತೆ, ಉತ್ತರ ಗಾಜಾದ ಜನರು ವಿದ್ಯುತ್, ನೀರು, ಒಳಚರಂಡಿ ಇತ್ಯಾದಿ ಮೂಲ ಸೌಕರ್ಯಗಳ ಅನುಪಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಗಾಜಾದ ಸ್ಥಿತಿಯು ಬರಗಾಲದಂತಹ ಪರಿಸ್ಥಿತಿಗಿಂತ ಕಡಿಮೆಯಿಲ್ಲ ಎಂದು ಹೇಳಲಾಗುತ್ತಿದೆ.ರಾಫಾದ ಅತಿದೊಡ್ಡ ವಸತಿ ಸಮುಚ್ಚಯದ ಮೇಲೆ ಇಸ್ರೇಲ್ ಏರ್ ಸ್ಟ್ರೈಕ್ಶನಿವಾರ ಇಸ್ರೇಲ್ ಸೇನೆಯು ದಕ್ಷಿಣ ಗಾಜಾ ಪಟ್ಟಿಯಲ್ಲಿರುವ ರಾಫಾ ಗಡಿಯಲ್ಲಿ ಅತಿದೊಡ್ಡ ವಸತಿ ಸಮುಚ್ಚಯವೊಂದನ್ನು ಹೊಡೆದುರುಳಿಸಿದೆ. ಇದರಿಂದಾಗಿ ಇಲ್ಲಿ ವಾಸಿಸುತ್ತಿದ್ದ ನೂರಾರು ಗಾಜಾ ಪ್ರಜೆಗಳು ನಿರಾಶ್ರಿತರಾಗಿದ್ದಾರೆ ಎಂದು ಹೇಳಲಾಗಿದೆ.