ಪ್ಯಾಂಡೋರಾ ಪೇಪರ್ಸ್: ಜಗತ್ತಿನ ಪ್ರಭಾವಿ ವ್ಯಕ್ತಿಗಳ ವಿದೇಶಿ ಹೂಡಿಕೆಗಳ ರಹಸ್ಯ ದಾಖಲೆಗಳು ಸೋರಿಕೆ 117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ. ಭಾರತದ ಕ್ರಿಕೆಟ್ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್, ಪಾಪ್ ಸ್ಟಾರ್ ಶಕೀರಾ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ. ನವದೆಹಲಿ: 91 ದೇಶದ 35 ಮಂದಿ ಪ್ರಭಾವಿ ವಿಶ್ವ ನಾಯಕರು, 330 ರಾಜಕಾರಣಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ರಹಸ್ಯ ಸಂಪತ್ತಿನ ಮಾಹಿತಿಯನ್ನೊಳಗೊಂಡ ಲಕ್ಷಾಂತರ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ಪ್ರಭಾವಿ ವ್ಯಕ್ತಿಗಳು ವಿದೇಶದಲ್ಲಿ ನಡೆಸಿರುವ ಹೂಡಿಕೆ ಮಾಹಿತಿಯನ್ನು ಈ ದಾಖಲೆಗಳು ಒಳಗೊಂಡಿವೆ. ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಮಂಡಳಿ ಈ ತನಿಖೆಯನ್ನು ನಡೆಸಿತ್ತು.ಇದನ್ನೂ ಓದಿ: ಈ ವರ್ಷ ಅದಾನಿ ಆದಾಯ ದಿನವೊಂದಕ್ಕೆ 1,000 ಕೋಟಿ: ಶ್ರೀಮಂತರ ಪಟ್ಟಿ ಹೀಗಿದೆ...ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ಪುತಿನ್, ಜೋರ್ಡಾನ್ ರಾಜ ಸೇರಿದಂತೆ ಭಾರತ ಪಾಕಿಸ್ತಾನದ ರಾಜಕಾರಣಿಗಳು, ಸೆಲಬ್ರಿಟಿಗಳ ದಾಖಲೆಯೂ ಇದರಲ್ಲಿದೆ ಎನ್ನಲಾಗುತ್ತಿದೆ. 117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಬಡತನ-ಸಿರಿತನಕ್ಕೆ ಕಾರಣವೇನು?ಬಿಬಿಸಿ, ಗಾರ್ಡಿಯನ್ ಸೇರಿದಂತೆ ಭಾರತದ ಮಾಧ್ಯಮ ಸಂಸ್ಥೆಗಳೂ ಈ ತನಿಖೆಯಲ್ಲಿ ಪಾಲ್ಗೊಂಡಿವೆ. ಭಾರತದ ಕ್ರಿಕೆಟ್ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್, ಪಾಪ್ ಸ್ಟಾರ್ ಶಕೀರಾ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ. : # - . 600+ , . ://./qXMuUcqPc4ಸಚಿನ್ ತೆಂಡೂಲ್ಕರ್ ಅಟಾರ್ನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ವಿದೇಶದಲ್ಲಿ ನಡೆಸಿರುವ ಹೂಡಿಕೆಗಳು ಕಾನೂನುಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ಭಾರತದ 6 ಮತ್ತು ಪಾಕಿಸ್ತಾನದ 7 ಮಂದಿ ಪ್ರಭಾವಿ ರಾಜಕಾರಣಿಗಳ ವಿದೇಶಿ ಹೂಡಿಕೆ ಮಾಹಿತಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಜಗತ್ತಿನ ಅತಿ ದೊಡ್ಡ ಶ್ರೀಮಂತ ಇಲಾನ್ ಮುಸ್ಕ್ ಯಶಸ್ಸಿನ ಸಪ್ತ ಸೂತ್ರಗಳು!ಯುಕ್ರೇನ್, ಕೆನ್ಯಾ, ಈಕ್ವೆಡಾರ್ ಅಧ್ಯಕ್ಷ, ಜೆಕ್ ಪ್ರಧಾನಿ ಸೇರಿದಂತೆ ರಷ್ಯಾದ 130 ಮಂದಿ ಶತಕೋಟ್ಯಧಿಪತಿಗಳು, ಅಮೆರಿಕದ ಶತಕೋಟ್ಯಧಿಪತಿಗಳ ವ್ಯವಹಾರಗಳನ್ನು ಈ ದಾಖಲೆಗಳಲ್ಲಿ ಬಹಿರಂಗಪಡಿಸಲಾಗಿದೆ. 2016ರಲ್ಲಿ ಇದೇ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಮಂಡಳಿ ಪನಾಮ ಪೇಪರ್ಸ್ ಎನ್ನುವ ಪ್ರಾಜೆಕ್ಟ್ ಅಡಿ ರಹಸ್ಯ ದಾಖಲೆಗಳನ್ನು ಬಿಡುಗಡೆಗೊಳಿಸಿತ್ತು. ಅಮಿತಾಭ್ ಬಚ್ಚನ್ ಸೇರಿದಂತೆ ವಿಶ್ವದ ಹಲವು ನಾಯಕರ ಹೂಡಿಕೆ ದಾಖಲೆಗಳನ್ನು ಆ ಸಮಯದಲ್ಲಿ ಬಹಿರಂಗಗೊಳಿಸಲಾಗಿತ್ತು.ಇದನ್ನೂ ಓದಿ: ಭಾರತೀಯ ಆ್ಯಪ್‌ ಗೆ ಚೀನಾ ಹೂಡಿಕೆ, ಡಾಟಾ ಸೋರಿಕೆಯ ಪ್ರಶ್ನೆಗಳ 'ಕೂ'ಗು: ಸಂಸ್ಥಾಪಕರ ಉತ್ತರ ಹೀಗಿದೆ...ನಿಷೇಧಿತ ಉಗ್ರಸಂಘಟನೆ ಜೊತೆ ಸರ್ಕಾರ ಮಾತುಕತೆ: ಪಾಕ್ ಗೃಹಸಚಿವ ಸಮರ್ಥನೆಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆಜರ್ಮನಿ: ಹಿಟ್ಲರನ ನಾಜಿ ಕಮಾಂಡರ್ ಪಿಎ ಆಗಿದ್ದ 96 ವರ್ಷದ ಮಹಿಳೆ ವಿಚಾರಣೆ: ಆರೋಪ ದಾಖಲಾದಾಗ ಆಕೆಗೆ 21ಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆರಾಜಪ್ರಭುತ್ವದ ಕತಾರ್ ನಲ್ಲಿ ಇದೇ ಮೊದಲ ಬಾರಿಗೆ ಶಾಸಕಾಂಗ ಮಂಡಳಿ ಮತದಾನಪಾಕ್ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾ ವಿಗ್ರಹ ಸ್ಫೋಟಿಸಿ ಧ್ವಂಸ: ಬಲೂಚ್ ಬಂಡುಕೋರರ ಕೃತ್ಯ