ಆತಂಕಕಾರಿ ಅಂಶಗಳ ಬಗ್ಗೆ ಮೋದಿ ಬಳಿ ನೇರವಾಗಿ ವಿಷಯ ಪ್ರಸ್ತಾಪಿಸಿ: ಬೈಡನ್ ಗೆ ಅಮೇರಿಕಾ ಶಾಸಕರು ಅಮೇರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರ ಬಳಿ ದ್ವಿಪಕ್ಷೀಯ ಮಾತುಕತೆ ವೇಳೆ, ಆತಂಕಕ್ಕೆ ಕಾರಣವಾಗಿರುವ ವಿಷಯಗಳನ್ನು ನೇರವಾಗಿ ಪ್ರಸ್ತಾಪಿಸಲು ಮನವಿ ಮಾಡಿ ಅಧ್ಯಕ್ಷ ಜೋ ಬೈಡನ್ ಗೆ ಅಮೇರಿಕಾ ಶಾಸಕರು ಪತ್ರ ಬರೆದಿದ್ದಾರೆ. ವಾಷಿಂಗ್ ಟನ್: ಅಮೇರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರ ಬಳಿ ದ್ವಿಪಕ್ಷೀಯ ಮಾತುಕತೆ ವೇಳೆ, ಆತಂಕಕ್ಕೆ ಕಾರಣವಾಗಿರುವ ವಿಷಯಗಳನ್ನು ನೇರವಾಗಿ ಪ್ರಸ್ತಾಪಿಸಲು ಮನವಿ ಮಾಡಿ ಅಧ್ಯಕ್ಷ ಜೋ ಬೈಡನ್ ಗೆ ಅಮೇರಿಕಾ ಶಾಸಕರು ಪತ್ರ ಬರೆದಿದ್ದಾರೆ.ಅಮೇರಿಕಾ- ಭಾರತದ ನಡುವೆ ದೀರ್ಘಾವಧಿ, ಬಲಿಷ್ಠ, ಯಶಸ್ವಿ ಸಂಬಂಧಕ್ಕಾಗಿ ಮುಖ್ಯವಾಗಿರುವ ಅಂಶಗಳನ್ನು ಚರ್ಚೆ ಮಾಡಬೇಕು ಎಂದು ಅಮೇರಿಕಾ ಶಾಸಕರು ಹೇಳಿದ್ದಾರೆ.ಸ್ನೇಹಿತರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ, ಪ್ರಾಮಾಣಿಕವಾಗಿ ಚರ್ಚೆ ಮಾಡಬೇಕೆಂಬುದನ್ನು ಅಮೇರಿಕಾ- ಭಾರತದ ಬಲಿಷ್ಠ ಸಂಬಂಧದ ಬೆಂಬಲಿಗರಾಗಿ ನಾವು ನಂಬುತ್ತೇವೆ ಎಂದು ಸಂಸದರಾದ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.ಇದನ್ನೂ ಓದಿ: ನ್ಯೂಯಾರ್ಕ್ ತಲುಪಿದ ಪ್ರಧಾನಿ ಮೋದಿ: 3 ದಿನಗಳ ಅಮೇರಿಕಾ ಪ್ರವಾಸ ಆರಂಭ; ಯೋಗ ದಿನಾಚರಣೆಯಲ್ಲಿ ಭಾಗಿಭಾರತ ಮತ್ತು ಯುಎಸ್ ನಡುವಿನ ಪರಸ್ಪರ ಹಿತಾಸಕ್ತಿಗಳ ಹಲವು ಕ್ಷೇತ್ರಗಳ ಜೊತೆಗೆ - ನೀವು ನೇರವಾಗಿ ಆತಂಕ ಇರುವ ಕ್ಷೇತ್ರಗಳ ಬಗ್ಗೆಯೂ ಪ್ರಧಾನಿ ಮೋದಿಯವರ ಬಳಿ ಪ್ರಸ್ತಾಪಿಸಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದು ಸಂಸದರು ಪತ್ರದಲ್ಲಿ ಬರೆದಿದ್ದಾರೆ.