ವಿಮಾನ ಸಂಚಾರ ಪುನರಾರಂಭಿಸಲು ತಾಲಿಬಾನ್ ನಾಯಕತ್ವದ ಅಫ್ಘಾನಿಸ್ತಾನ ಸರ್ಕಾರ ಭಾರತಕ್ಕೆ ಮನವಿ ಅಮೆರಿಕ ಪಡೆಗಳು ನಿರ್ಗಮಿಸುವ ಮುನ್ನ ವಿಮಾನ ನಿಲ್ದಾಣಕ್ಕೆ ಹಾನಿ ಉಂಟುಮಾಡಿ ತೆರಳಿದ್ದರು. ಈ ಸಂದರ್ಭದಲ್ಲಿ ನಮ್ಮ ಮಿತ್ರ ರಾಷ್ಟ್ರವಾದ ಕತಾರ್ ತಾಂತ್ರಿಕ ಸಹಕಾರದಿಂದ ವಿಮಾನನಿಲ್ದಾನದ ದೋಷಗಳನ್ನು ಸರಿಪಡಿಸಲಾಗಿದೆ ಎಂದ ಆಫ್ಘನ್ ಸಚಿವ. ಕಾಬೂಲ್: ಅಫ್ಘಾನಿಸ್ತಾನ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಭಾರತದೊಂದಿಗೆ ಸಂವಹನ ನಡೆಸಿದೆ. ಸ್ಥಗಿತಗೊಂಡಿದ್ದ ವಿಮಾನ ಸಂಚಾರವನ್ನು ಪುನರಾರಂಭಿಸಲು ತಾಲಿಬಾನ್ ಮುಂದಾಳತ್ವದ ಆಫ್ಘನ್ ಸರ್ಕಾರ ಭಾರತವನ್ನು ಕೋರಿದೆ. ಇದನ್ನೂ ಓದಿ: ಎನ್ ಆರ್ ಎಫ್ ಬೆಂಬಲಿಗನ ಮಗುವನ್ನು ಹತ್ಯೆಗೈದ ತಾಲಿಬಾನ್: ಅಫ್ಘಾನಿಸ್ತಾನದಲ್ಲಿ ಮುಂದುವರಿದ ರಿವೆಂಜ್ ಕಿಲ್ಲಿಂಗ್ಅಫ್ಘಾನಿಸ್ತಾನದ ವಿಮಾನಯಾನ ಸಚಿವ ಅಲ್ಹಜ್ ಹಮೀದುಲ್ಲ ಅಖುಂಝಾದಾ ಈ ಬಗ್ಗೆ ಭಾರತದ ವಿಮಾನಯಾನ ಮುಖ್ಯಸ್ಥ ಅರುಣ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಸಾರಾಂಶ- ನಿಮಗೆ ತಿಳಿದಿರುವಂತೆ ಅಮೆರಿಕ ಪಡೆಗಳು ನಿರ್ಗಮಿಸುವ ಮುನ್ನ ವಿಮಾನ ನಿಲ್ದಾಣಕ್ಕೆ ಹಾನಿ ಉಂಟುಮಾಡಿ ತೆರಳಿದ್ದರು. ಈ ಸಂದರ್ಭದಲ್ಲಿ ನಮ್ಮ ಮಿತ್ರ ರಾಷ್ಟ್ರವಾದ ಕತಾರ್ ತಾಂತ್ರಿಕ ಸಹಕಾರದಿಂದ ವಿಮಾನನಿಲ್ದಾನದ ದೋಷಗಳನ್ನು ಸರಿಪಡಿಸಲಾಗಿದೆ. ಈಗ ಕಾಬೂಲ್ ವಿಮಾನನಿಲ್ದಾಣ ವಿಮಾನ ಕಾರ್ಯಚಾಲನೆಗೊಂಡಿದೆ.ಅಫ್ಘಾನಿಸ್ತಾನದ ದೇಶೀಯ ವಿಮಾನ ಸಂಸ್ಥಗಳಾದ ಅರಿಯಾನ ಆಫ್ಘನ್ ಏರ್ ಲೈನ್ ಮತ್ತು ಕಾಮ್ ಏರ್ ವಿಮಾನಗಳು ಭಾರತಕ್ಕೆ ಹಾರಾಟ ಶುರುಮಾಡಲು ಸಿದ್ಧವಾಗಿವೆ. ಅದೇ ರೀತಿ ಭಾರತ ವಿಮಾನಯಾನ ಸಂಸ್ಥೆಗಳೂ ಆಫ್ಘನ್ ನೆಲದ ಮೇಲೆ ಹಾರಾಟ ಮುಂದುವರಿಸಬಹುದು. ಇದನ್ನೂ ಓದಿ: ಕ್ರಿಕೆಟ್ ನಲ್ಲಿ 'ಹಕ್ಕಾನಿ ನೆಟ್ವರ್ಕ್' ಪ್ರಭಾವವಿರುವ ಅಫ್ಘಾನಿಸ್ತಾನಕ್ಕೆ ಟಿ 20 ವಿಶ್ವಕಪ್ ನಲ್ಲಿ ಆಡಲು ಐಸಿಸಿ ಅವಕಾಶ ಕೊಡಲಿದೆಯೇ?ಪತ್ರದಲ್ಲಿ ಭದ್ರತೆಯ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಅಫ್ಘಾನಿಸ್ತಾನ ಭಾರತಕ್ಕೆ ಭರವಸೆ ನೀಡಿದೆ. ಈ ಹಿಂದೆ ಭಾರತದ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಭಾರತ ಮತ್ತು ಕಾಬೂಲ್ ನಡುವೆ ವಿಮಾನ ಹಾರಾಟ ಸದ್ಯಕ್ಕೆ ಮುಂದುವರಿಯುವ ಸೂಚನೆ ನೀಡಿದ್ದರು.ಇದನ್ನೂ ಓದಿ: ಆಫ್ಘನ್ ನಲ್ಲಿ ಅಮೆರಿಕ ಬೆಂಬಲಿಸಿ ತಪ್ಪು ಮಾಡಿದೆವು, ತಾಲಿಬಾನಿಗಳೊಂದಿಗೆ ಚರ್ಚಿಸುತ್ತಿದ್ದೇನೆ: ಪಾಕ್‌ ಪ್ರಧಾನಿ ಇಮ್ರಾನ್ ಖಾನ್ಆರ್ ಎಸ್ ಎಸ್, ಬಿಜೆಪಿಯವರದ್ದು ತಾಲಿಬಾನ್ ಸಂಸ್ಕೃತಿ: ಸಿದ್ದರಾಮಯ್ಯತಾಲಿಬಾನ್- ಆರ್ ಎಸ್ ಎಸ್ ಹೋಲಿಕೆ ಹೇಳಿಕೆಗಾಗಿ ಮೊಕದ್ದಮೆ: ಜಾವೇದ್ ಅಖ್ತರ್ ಗೆ ಥಾಣೆ ಕೋರ್ಟ್ ನೋಟಿಸ್ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿ ಪ್ರಸಾರಕ್ಕೆ ತಾಲಿಬಾನ್ ನಿಷೇಧ!ಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ನಿಷೇಧಮಹಿಳೆಯರು ಮಕ್ಕಳನ್ನಷ್ಟೇ ಹೆರಬೇಕು, ಮಂತ್ರಿಗಳಾಗಬಾರದು: ತಾಲಿಬಾನ್ ವಕ್ತಾರ