ಬಡ ದೇಶಗಳಿಗೆ ಹೆಚ್ಚಿನ ಕೋವಿಡ್ ಲಸಿಕೆ ಪೂರೈಕೆ ಕರೆಯೊಂದಿಗೆ ಜಿ-20 ಶೃಂಗಸಭೆ ಆರಂಭ ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಅವರು ಬಡ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆಯುವಂತಾಗಬೇಕು ಎಂದು ಕರೆ ನೀಡುವ ಮೂಲಕ ವಿಶ್ವದ ಶಕ್ತಿಶಾಲಿ ಆರ್ಥಿಕತೆ ಸಮ್ಮೇಳನ ಜಿ-20 ಶೃಂಗಸಭೆಗೆ ಚಾಲನೆ... ರೋಮ್: ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಅವರು ಬಡ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆಯುವಂತಾಗಬೇಕು ಎಂದು ಕರೆ ನೀಡುವ ಮೂಲಕ ವಿಶ್ವದ ಶಕ್ತಿಶಾಲಿ ಆರ್ಥಿಕತೆ ಸಮ್ಮೇಳನ ಜಿ-20 ಶೃಂಗಸಭೆಗೆ ಚಾಲನೆ ನೀಡಿದರು.ಜಾಗತಿಕವಾಗಿ ಕೋವಿಡ್ ಲಸಿಕೆ ಅಂತರ "ನೈತಿಕವಾಗಿ ಸ್ವೀಕಾರಾರ್ಹವಲ್ಲ" ಎಂದಿರುವ ಡ್ರಾಗಿ ಅವರು, ವಿಶ್ವದ ಬಡ ದೇಶಗಳಲ್ಲಿ ಕೇವಲ ಶೇ. 3 ರಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಶ್ರೀಮಂತ ರಾಷ್ಟ್ರಗಳಲ್ಲಿ ಶೇ. 70 ಜನ ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.ಇದನ್ನು ಓದಿ: ಜಿ-20 ಶೃಂಗಸಭೆ: ಪೋಪ್ ಫ್ರಾನ್ಸಿಸ್ ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಆಹ್ವಾನಕಡಿಮೆ-ಆದಾಯದ ದೇಶಗಳಿಗೆ ಹೆಚ್ಚಿನ ಲಸಿಕೆ ಪೂರೈಸಲು ಸಾಮೂಹಿಕ ಸಹಾಯಕ್ಕಾಗಿ ಶೃಂಗಸಭೆಯ ಮೂಲಕ ಡ್ರಾಗಿ ಕರೆ ನೀಡಿದರು. ಡ್ರಾಗಿ ಅವರು ರೋಮ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ- 20 ಶೃಂಗಸಭೆಯ ಆತಿಥ್ಯ ವಹಿಸಿದ್ದಾರೆ.ಇಂದಿನ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಜಾಗತಿಕ ಕನಿಷ್ಠ ಕಾರ್ಪೋರೇಟ್ ತೆರಿಗೆ ದರ, ಕೊವಿಡ್ 19 ಸಾಂಕ್ರಾಮಿಕದಿಂದ ಆರೋಗ್ಯದಲ್ಲಿ ಚೇತರಿಕೆ, ಜಾಗತಿಕ ಅಭಿವೃದ್ಧಿ ಇತ್ಯಾದಿ ವಿಚಾರಗಳನ್ನು ಇಂದು ನಾಯಕರು ವ್ಯಾಪಕವಾಗಿ ಚರ್ಚಿಸಲಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಜಿ-20 ನಾಯಕರ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಜಾಗತಿಕ ಒಳಿತಿಗಾಗಿ ಇರುವ ಅತಿಮುಖ್ಯವಾದ ವೇದಿಕೆಯಾದ ಜಿ-20 ಸಂಘಟನೆಯ ನಾಯಕರು ಇಂದು ರೋಮ್ನಲ್ಲಿ ಭೇಟಿಯಾದರು ಎಂದು ಹೇಳಿದೆ. ಈ ಫೋಟೋದಲ್ಲಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪಿಎಂ ಬೋರಿಸ್ ಜಾನ್ಸನ್ ಇತರ ಪ್ರಮುಖ ನಾಯಕರು ಇದ್ದಾರೆ. @g20org , . ../lzSte0d8Ey