ಚೀನಾದಲ್ಲಿ ಹೆದ್ದಾರಿ ಕುಸಿತ: 24 ಸಾವು, 30 ಮಂದಿಗೆ ಗಾಯ ನೆರೆಯ ಚೀನಾದಲ್ಲಿ ಭೀಕರ ಹೆದ್ದಾರಿ ಕುಸಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿ, 30 ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೀಜಿಂಗ್: ನೆರೆಯ ಚೀನಾದಲ್ಲಿ ಭೀಕರ ಹೆದ್ದಾರಿ ಕುಸಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿ, 30 ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಚೀನಾದ ದಕ್ಷಿಣದ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಬುಧವಾರ ಹೆದ್ದಾರಿಯಲ್ಲಿ ಕೆಲ ಭಾಗ ಕುಸಿದ ಪರಿಣಾಮ ಅಲ್ಲಿದ್ದ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಕೈಗೊಂಡಿರುವ ಸಿಬ್ಬಂದಿ, 30 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಮಿಜೌ–ದಾಬು ಎಕ್ಸ್‌ಪ್ರೆಸ್‌ವೇನಲ್ಲಿ 58 ಅಡಿ ಉದ್ದದಷ್ಟು ಭೂ ಭಾಗ ಕುಸಿದಿದ್ದರಿಂದ 18 ಕಾರುಗಳು ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಎರಡು ವಾರಗಳ ಹಿಂದೆ ಭಾರಿ ಮಳೆಯಾಗಿದ್ದು, ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಗ್ರಾಮಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಮಿಜೌ ನಗರದಲ್ಲಿ ಸಹ ಭಾರಿ ಮಳೆಯಾಗಿದೆ. ಇದು ಇಲ್ಲಿನ ಭೂ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.ಪ್ರಾಂತ್ಯದ ಮಿಜೌ ನಗರದಲ್ಲಿರುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಸರ್ಕಾರಿ ಒಡೆತನದ ಮಾಧ್ಯಮ ಷಿನ್‌ಹುವಾ ನ್ಯೂಸ್‌ ವರದಿ ಮಾಡಿದೆ. ಹೆದ್ದಾರಿಯ ಭಾಗವೊಂದು ಕುಸಿದಿರುವ ಕುರಿತ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವಘಡದ ಪರಿಣಾಮ ಕೆಲವು ವಾಹನಗಳು ಹೊತ್ತಿ ಉರಿದಿವೆ. ಸುಟ್ಟು ಕರಕಲಾದ ಕಾರುಗಳ ಚಿತ್ರಗಳು ಸಹ ಹರಿದಾಡಿವೆ.🚨#: . 📌# | # 19 30 … ../r1hR0UXw65