ಚೀನಾದಿಂದ ಹೊಸ ಭೂ ಗಡಿ ಕಾನೂನು ಮಂಡನೆ: ಭಾರತಕ್ಕೆ ಪರೋಕ್ಷ ಎಚ್ಚರಿಕೆ ಭಾರತದೊಂದಿಗೆ ಗಡಿ ಬಿಕ್ಕಟ್ಟನ್ನು ಹೊಂದಿರುವ ಚೀನಾ ನೂತನ ಕಾನೂನನ್ನು ತಂದಿರುವುದು ಭಾರತಕ್ಕೆ ಪರೋಕ್ಷ ಎಚ್ಚರಿಕೆಯಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಬೀಜಿಂಗ್: ಚೀನಾ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಚೀನಾ ತಾನು ನೂತನ ಭೂ ಗಡಿ ಕಾನೂನನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಐದೆ. ಚೀನಾ ಸಂಸತ್ತಿನಲ್ಲಿ ಈ ಕಾನೂನಿಗೆ ಒಪ್ಪಿಗೆ ದೊರೆತಿದ್ದು ಮುಂದಿನ ವರ್ಷ ಜನವರಿ1 ರಿಂದ ಅನುಷ್ಠಾನಕ್ಕೆ ಬರಲಿದೆ.ಇದನ್ನೂ ಓದಿ: ಚೀನಾದ ಸೈಬರ್ ತಂತ್ರಜ್ಞಾನ ಬೆಳವಣಿಗೆ ಅತ್ಯಂತ ಕಳವಳಕಾರಿ: ಬಿಪಿನ್ ರಾವತ್ಭಾರತದೊಂದಿಗೆ ಗಡಿ ಬಿಕ್ಕಟ್ಟನ್ನು ಹೊಂದಿರುವ ಚೀನಾ ನೂತನ ಕಾನೂನನ್ನು ತಂದಿರುವುದು ಭಾರತಕ್ಕೆ ಪರೋಕ್ಷ ಎಚ್ಚರಿಕೆಯಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಎಲ್ ಎಸಿ ಬಳಿ ಹೆಚ್ಚಿದ ಚೀನಾ ಸೇನೆ ಚಟುವಟಿಕೆ: ಸೇನೆಯಿಂದ ಹದ್ದಿನ ಕಣ್ಣು- ಪೂರ್ವ ಸೇನಾ ಕಮಾಂಡರ್ ಚೀನಾ ಭೂಗಡಿಯಲ್ಲಿ ಯಾವುದೇ ರೀತಿಯಲ್ಲಿ ಉಲ್ಲಂಘನೆ ಕಂಡುಬಂದರೆ ಹಾಗೂ ತನ್ನ ದೇಶದ ಅಖಂಡತೆಗೆ ಧಕ್ಕೆ ಒದಗಿಬಂಡರೆ ತನ್ನ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ಈ ಕಾನೂನು ಚೀನಾಗೆ ಅನುವು ಮಾಡಿಕೊಡಲಿದೆ. ಇದನ್ನೂ ಓದಿ: ಲಡಾಖ್ ಘರ್ಷಣೆ: ಐಟಿಬಿಪಿ ಪಡೆಯ 20 ಸಿಬ್ಬಂದಿಗಳಿಗೆ ಶೌರ್ಯ ಪದಕಗಳ ಪ್ರದಾನಈ ನೂತನ ಕಾನೂನಿನಲ್ಲಿ ಗಡಿ ಬಲವರ್ಧನೆ ಮಾತ್ರವಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಹಾಗೂ ಅಲ್ಲಿನ ಜನರ ಜೀವನ ಸದೃಢಗೊಳಿಸುವ ಕಾರ್ಯಕ್ರಮಗಳ ಕುರಿತಾಗಿ ಉಲ್ಲೇಖವಿದೆ.ಚೀನಾ ಸೇನೆಯ ದಾಳಿಗೆ ಸಜ್ಜು: ಭಾರತೀಯ ಯೋಧರು ಗಡಿ ಬಳಿ ಯಾವ ರೀತಿ ತರಬೇತಿ ಪಡೆಯುತ್ತಿದ್ದಾರೆ ವಿಡಿಯೊ ನೋಡಿ!ವರ್ಷದಲ್ಲಿ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡ ಜಾಕ್ ಮಾ: ಆಲಿ ಬಾಬಾ ಮೇಲೆ ಕೆಂಗಣ್ಣು ಬೀರಿದ್ದ ಚೀನಾನೇಪಾಳಕ್ಕೆ 20 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲಿರುವ ಚೀನಾತಾಲೀಬಾನ್, ಚೀನಾ- ಪಾಕ್ ಕೃತ್ರಿಮ ಕೂಟದ ಕುರಿತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಆತಂಕಡೊಕ್ಲಾಮ್ ಸಂಘರ್ಷ ಇತಿಹಾಸದ ನಡುವೆ ಚೀನಾ-ಭೂತಾನ್ ಒಪ್ಪಂದಕ್ಕೆ ಸಹಿ; 'ಸೂಕ್ಷ್ಮವಾಗಿ ಗಮನಿಸಿದ್ದೇವೆ': ಭಾರತ