ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಕಾಣೆಯಾಗಿದ್ದ ಚೀನಾ ಟೆನಿಸ್ ಆಟಗಾರ್ತಿ ಸುರಕ್ಷಿತ: ಸರ್ಕಾರಿ ಸುದ್ದಿವಾಹಿನಿ ಮುಖ್ಯಸ್ಥ ಹೇಳಿಕೆ ಸರ್ಕಾರದ ವಿರುದ್ಧ ಮಾತನಾಡುವವರನ್ನು ಕಾಣೆ ಮಾಡುವುದಕ್ಕೆ ಚೀನಾದ ಸರ್ಕಾರ ಕುಖ್ಯಾತಿ ಪಡೆದಿದೆ. ಹಾಗಾಗಿ ಈ ಬಾರಿಯೂ ಅದು ಮುಂದುವರಿದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಬೀಜಿಂಗ್: ಚೀನಾ ಸರ್ಕಾರದ ಪ್ರಭಾವಿ ರಾಜಕಾರಣಿಯಾದ ಜಾಂಗ್ ಗೌಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಗಂಭೀರ ಆರೋಪ ಮಾಡಿದ್ದ ರಾಷ್ಟ್ರೀಯ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರಿ ಸುದ್ದಿವಾಹಿನಿಯ ಮುಖ್ಯಸ್ಥರು ಹೇಳಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿಯೇ ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗೆ ಭಾರತ- ಚೀನಾ ಒಪ್ಪಿಗೆಈ ಹಿಂದೆ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ ಅವರು ಪ್ರಭಾವಿ ರಾಜಕಾರಣಿ ವಿರುದ್ಧ ಆರೋಪ ಮಾಡಿದ ನಂತರ ಕಾಣೆಯಾಗಿದ್ದಾರೆ, ಅವರನ್ನು ಸರ್ಕಾರಿ ಏಜೆಂಟರು ಅಪಹರಣ ಮಾಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಇದನ್ನೂ ಓದಿ: 4 ತಿಂಗಳ ಬಳಿಕ ಟಿಕ್ಟಾಕ್ ಮೇಲಿನ ನಿಷೇಧ ವಾಪಸ್ ತೆಗೆದುಕೊಂಡ ಪಾಕ್ಸರ್ಕಾರದ ವಿರುದ್ಧ ಮಾತನಾಡುವವರನ್ನು ಕಾಣೆ ಮಾಡುವುದಕ್ಕೆ ಚೀನಾದ ಸರ್ಕಾರ ಕುಖ್ಯಾತಿ ಪಡೆದಿದೆ. ಹಾಗಾಗಿ ಈ ಬಾರಿಯೂ ಅದು ಮುಂದುವರಿದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.ಇದನ್ನೂ ಓದಿ: ಚೀನಾದೊಂದಿಗಿನ ಸಂಘರ್ಷ: ತೈವಾನ್ ನಿಂದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳ ನಿಯೋಜನೆಇದೀಗ ಆಟಗಾರ್ತಿ ಸುರಕ್ಷಿತವಾಗಿದ್ದು, ತಮ್ಮ ಮನೆಯಲ್ಲೇ ಇದ್ದಾರೆ. ಶೀಘ್ರದಲ್ಲಿ ಅವರು ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿವಾಹಿನಿ ಮುಖ್ಯಸ್ಥರು ತಿಳಿಸಿದ್ದಾರೆ.ಇದನ್ನೂ ಓದಿ: ವಿಶ್ವದ ಶ್ರೀಮಂತ ರಾಷ್ಟ್ರ: ಅಮೆರಿಕಾವನ್ನು ಹಿಂದಿಕ್ಕಿದ ಚೀನಾ ಬಳಿ ಇರುವ ಸಂಪತ್ತು ಎಷ್ಟು ಗೊತ್ತೇ?ಪಾಕ್ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್: ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲುಅತ್ಯಾಚಾರಿಗಳ ಕಾಮಾಸಕ್ತಿ ಕುಗ್ಗಿಸಲು ಕೆಮಿಕಲ್‌ ಕ್ಯಾಸ್ಟ್ರೇಶನ್‌: ಮಸೂದೆಗೆ ಪಾಕ್ ಸಂಸತ್ ಅಂಗೀಕಾರ! ಏನಿದು ಕೆಮಿಕಲ್ ಕ್ಯಾಸ್ಟ್ರೇಶನ್?ಅಧ್ಯಕ್ಷ ಬೈಡನ್ ಗೆ ಅನಾರೋಗ್ಯ: ಅಮೆರಿಕ ಇತಿಹಾಸದಲ್ಲಿ ಮೊದಲ ಬಾರಿ ಅಲ್ಪ ಹೊತ್ತಿಗೆ ಅಧ್ಯಕ್ಷ ಹುದ್ದೆ ಅಲಂಕರಿಸುತ್ತಿರುವ ಮಹಿಳೆ ಕಮಲಾ ಹ್ಯಾರಿಸ್!ಸತತ ಮೂರನೇ ದಿನವೂ ರಷ್ಯಾದಲ್ಲಿ ದಾಖಲೆಯ ಕೋವಿಡ್ ಸಾವು ವರದಿಬೈಡನ್-‌ ಕಮಲಾ ಹ್ಯಾರಿಸ್‌ ಭಿನ್ನಾಭಿಪ್ರಾಯ? ಹುದ್ದೆ ತ್ಯಜಿಸಲಿರುವ ಸಂವಹನ ನಿರ್ದೇಶಕಿ!