ಶ್ರೀಲಂಕಾದಲ್ಲಿ ಏಪ್ರಿಲ್ 25 ಕ್ಕೆ ಸ್ಥಳೀಯ ಚುನಾವಣೆ: ಚುನಾವಣಾ ಆಯೋಗ ಶ್ರೀಲಂಕಾದ ಸ್ಥಳೀಯ ಚುನಾವಣೆ ಏ.25 ಕ್ಕೆ ನಡೆಯಲಿದೆ ಎಂದು ಅಲ್ಲಿನ ಚುನಾವಣಾ ಆಯೋಗ ಹೇಳಿದೆ. ಕೊಲಂಬೋ: ಶ್ರೀಲಂಕಾದ ಸ್ಥಳೀಯ ಚುನಾವಣೆ ಏ.25 ಕ್ಕೆ ನಡೆಯಲಿದೆ ಎಂದು ಅಲ್ಲಿನ ಚುನಾವಣಾ ಆಯೋಗ ಹೇಳಿದೆ. ಮಾರ್ಚ್ 9 ಕ್ಕೆ ಈ ಸ್ಥಳೀಯ ಚುನಾವಣೆಗಳು ನಿಗದಿಯಾಗಿತ್ತು. ಆದರೆ ದೇಶದ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಕಾರಣದಿಂದ ಚುನಾವಣೆಯನ್ನು ಮುಂದೂಡಲ್ಪಟ್ಟಿತ್ತು. ಜಿಲ್ಲೆಗಳ ಚುನಾವಣಾ ಅಧಿಕಾರಿಗಳು ಶೀಘ್ರವೇ ಹೊಸ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿತ್ತು. ಚುನಾವಣೆ ನಡೆಸುವುದಕ್ಕೆ ವ್ಯವಸ್ಥೆ ಮಾಡಲು ಸುಪ್ರೀಂ ಕೋರ್ಟ್ ನಿಂದ ನಿರ್ದೇಶನ ಪಡೆದಿದ್ದ ಅಧಿಕಾರಿಗಳೊಂದಿಗೆ ಆಯೋಗ ಸಭೆ ನಡೆಸಿದ ಬಳಿಕ ಹೊಸ ದಿನಾಂಕ ಘೋಷಣೆಯಾಗಿದೆ. ಇದನ್ನೂ ಓದಿ: ಮತಪತ್ರಗಳ ಮುದ್ರಣಕ್ಕೆ ಹಣವಿಲ್ಲ, ಶ್ರೀಲಂಕಾದಲ್ಲಿ ಚುನಾವಣೆ ಮುಂದೂಡಿಕೆ!2023 ರ ಬಜೆಟ್ ನಲ್ಲಿ 340 ಸ್ಥಳೀಯ ಪರಿಷತ್ ಗಳಿಗೆ ಚುನಾವಣೆ ನಡೆಸುವುದಕ್ಕೆ ಘೋಷಿಸಿದ್ದ ಹಣವನ್ನು ಬಿಡುಗಡೆ ಮಾಡುವುದಕ್ಕೆ ಕಳೆದ ವಾರ ಲಂಕಾ ಸುಪ್ರೀಂ ಕೋರ್ಟ್ ಖಜಾನೆಯ ಕಾರ್ಯದರ್ಶಿಗೆ ಆದೇಶ ನೀಡಿದ್ದರು. ಚುನಾವಣೆ ನಡೆಸಲು ಹಣ ಬಿಡುಗಡೆ ಮಾಡದ ಅಧಿಕಾರಿಗಳ ವಿರುದ್ಧ ಮುಖ್ಯ ವಿಪಕ್ಷ ಸಮಾಗಿ ಜನ ಬಲವೇಗಾಯ (ಎಸ್ ಜೆಬಿ) ಪಕ್ಷದ ಸಂಸದರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು