ಮೆಕ್ಸಿಕೋದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಉರುಳಿಬಿದ್ದ ಬಸ್, 27 ಮಂದಿ ದುರ್ಮರಣ ಮೆಕ್ಸಿಕೋದಲ್ಲಿ ಪ್ರಯಾಣಿಕರ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಓಕ್ಸಾಕ: ಮೆಕ್ಸಿಕೋದಲ್ಲಿ ಪ್ರಯಾಣಿಕರ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಬಸ್ ಬಸ್ ಮಂಗಳವಾರ ರಾತ್ರಿ ರಾಜಧಾನಿ ಮೆಕ್ಸಿಕೋ ನಗರದಿಂದ ಸ್ಯಾಂಟಿಯಾಗೊ ಡಿ ಯೊಸೊಂಡುವಾಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಫ್ರಾನ್ಸ್ ಸಂಘರ್ಷ: ಗಲಭೆ ನಿಯಂತ್ರಣಕ್ಕೆ ಮ್ಯಾಕ್ರನ್ ಸರ್ಕಾರದ ಕಠಿಣ ಕ್ರಮ; ಸಂಘರ್ಷಕ್ಕೇನು ಕಾರಣ?ಈ ಸಂದರ್ಭದಲ್ಲಿ ಚಾಲಕ ವಾಹನದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದು, ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ 27 ಮಂದಿ ಸಾವನ್ನಪ್ಪಿ, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, 17 ಮಂದಿಯ ಪೈಕಿ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.