ಕೆನಡಾ: 3 ದೇವಾಲಯಕ್ಕೆ ನುಗ್ಗಿ ಕಳ್ಳತನ! ಕೆನಡಾದ ದುರ್ಹಾಮ್ ಪ್ರದೇಶದಲ್ಲಿ 3 ದೇವಾಲಯಕ್ಕೆ ನುಗ್ಗಿ ಹುಂಡಿಯಲ್ಲಿದ್ದ ನಗದನ್ನು ಕಳ್ಳತನ ಮಾಡಲಾಗಿದೆ. ಕೆನಡಾ: ಕೆನಡಾದ ದುರ್ಹಾಮ್ ಪ್ರದೇಶದಲ್ಲಿ 3 ದೇವಾಲಯಕ್ಕೆ ನುಗ್ಗಿ ಹುಂಡಿಯಲ್ಲಿದ್ದ ನಗದನ್ನು ಕಳ್ಳತನ ಮಾಡಲಾಗಿದೆ.ಪೊಲೀಸರು ಕಳ್ಳರಿಗಾಗಿ ಶೋಧಕಾರ್ಯಾಚರಣೆ ಕೈಗೊಂಡಿದ್ದಾರೆ. ಡರ್ಹಾಮ್ ಪೊಲೀಸ್ ಇಲಾಖೆಯು ಬುಧವಾರ ಹೇಳಿಕೆಯೊಂದರಲ್ಲಿ, ಸುಮಾರು 91 ಕೆಜಿ ತೂಕದ ಮತ್ತು ಕುಂಟುತ್ತಾ ನಡೆಯುತ್ತಿದ್ದ 5'9 ಪುರುಷನು ಭಾನುವಾರ ಪಿಕರಿಂಗ್‌ನಲ್ಲಿರುವ ಬೇಲಿ ಸ್ಟ್ರೀಟ್ ಮತ್ತು ಕ್ರೋಸ್ನೋ ಬೌಲೆವಾರ್ಡ್ ಪ್ರದೇಶದಲ್ಲಿನ ದೇವಾಲಯಕ್ಕೆ ನುಗ್ಗಿದ್ದಾನೆ.ಇದನ್ನೂ ಓದಿ: ಭಾರತದಲ್ಲಿ ಖಲೀಸ್ಥಾನಿಗಳಿಗೆ ಸಹಕಾರ, ಆಶ್ರಯ ನೀಡುತ್ತಿದ್ದ ಸಿಖ್ ಗೆ ಕೆನಡಾ ಪ್ರವೇಶ: ವರದಿಕಳ್ಳತನ ಮಾಡಿರುವ ವ್ಯಕ್ತಿ ನೀಲಿ ಸರ್ಜಿಕಲ್ ಮಾಸ್ಕ್, ಹಸಿರು ಕ್ಯಾಮೊ ಕಾರ್ಗೋ ಪ್ಯಾಂಟ್ ಧರಿಸಿ ಹಸಿರು ಬೂಟುಗಳನ್ನು ಧರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ 12.45ರ ಸುಮಾರಿಗೆ ಪುರುಷನೊಬ್ಬ ದೇವಾಲಯದೊಳಗೆ ಪ್ರವೇಶಿಸಿ ಕಾಣಿಕೆ ಡಬ್ಬಿಗಳಿಂದ ಅಪಾರ ಪ್ರಮಾಣದ ನಗದನ್ನು ತೆಗೆದುಕೊಳ್ಳುತ್ತಿರುವುದು ಭದ್ರತಾ ಕಣ್ಗಾವಲಿನಲ್ಲಿ ಕಂಡುಬಂದಿದೆ.