ಮೆಕ್ಸಿಕೋದಲ್ಲಿ ಮತ್ತೊಬ್ಬ ಪತ್ರಕರ್ತನ ಹತ್ಯೆ ಮೆಕ್ಸಿಕೋದಲ್ಲಿ ಪತ್ರಕರ್ತರ ಸರಣಿ ಹತ್ಯೆ ಮುಂದುವರೆದಿದ್ದು, ಆನ್‌ಲೈನ್ ಸ್ಥಳೀಯ ಸುದ್ದಿ ಕಾರ್ಯಕ್ರಮ ನಡೆಸುತ್ತಿದ್ದ ಪತ್ರಕರ್ತನನ್ನು ದಕ್ಷಿಣ ಮೆಕ್ಸಿಕೋದಲ್ಲಿ ಸೋಮವಾರ ಗುಂಡಿಕ್ಕಿ ಕೊಂದಿದ್ದು, ಇದರೊಂದಿಗೆ ಈ ವರ್ಷ ದೇಶವ್ಯಾಪಿ ಹತ್ಯೆಯಾದ... ಮೆಕ್ಸಿಕೋ ಸಿಟಿ: ಮೆಕ್ಸಿಕೋದಲ್ಲಿ ಪತ್ರಕರ್ತರ ಸರಣಿ ಹತ್ಯೆ ಮುಂದುವರೆದಿದ್ದು, ಆನ್‌ಲೈನ್ ಸ್ಥಳೀಯ ಸುದ್ದಿ ಕಾರ್ಯಕ್ರಮ ನಡೆಸುತ್ತಿದ್ದ ಪತ್ರಕರ್ತನನ್ನು ದಕ್ಷಿಣ ಮೆಕ್ಸಿಕೋದಲ್ಲಿ ಸೋಮವಾರ ಗುಂಡಿಕ್ಕಿ ಕೊಂದಿದ್ದು, ಇದರೊಂದಿಗೆ ಈ ವರ್ಷ ದೇಶವ್ಯಾಪಿ ಹತ್ಯೆಯಾದ ಪತ್ರಕರ್ತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ಪತ್ರಕರ್ತ ಫ್ರೆಡಿಡ್ ರೋಮನ್ ಅವರನ್ನು ರಾಜ್ಯದ ರಾಜಧಾನಿ ಚಿಲ್ಪಾನ್‌ಸಿಂಗೊದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ದಕ್ಷಿಣ ರಾಜ್ಯವಾದ ಗೆರೆರೊದಲ್ಲಿ ಪ್ರಾಸಿಕ್ಯೂಟರ್‌ಗಳು ಸೋಮವಾರ ತಿಳಿಸಿದ್ದಾರೆ.ಇದನ್ನು ಓದಿ: ರಷ್ಯಾ: ಭಾರತದ ಪ್ರಮುಖ ನಾಯಕನ ಹತ್ಯೆಗೆ ಸಂಚು ರೂಪಿಸುತ್ತಿದ್ದ ಐಎಸ್ ಆತ್ಮಾಹುತಿ ದಾಳಿಕೋರನ ಬಂಧನರೋಮನ್ ಅವರ ಕಾರ್ಯಕ್ರಮ "ದಿ ರಿಯಾಲಿಟಿ ಆಫ್ ಗೆರೆರೋ" ರಾಜ್ಯ ಮಟ್ಟದ ರಾಜಕೀಯದ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು ಮತ್ತು ಅವರು ಅಂಕಣವನ್ನೂ ಬರೆದಿದ್ದಾರೆ.ಮೆಕ್ಸಿಕೋ ಪತ್ರಕರ್ತರಿಗೆ 2022 ಅತ್ಯಂತ ಮಾರಕವಾಗಿದ್ದು, ಇದುವರೆಗೆ 15 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಹೀಗಾಗಿ ವರದಿಗಾರರಿಗೆ ಅತ್ಯಂತ ಅಪಾಯಕಾರಿ ದೇಶವೆಂದು ಪರಿಗಣಿಸಲಾಗಿದೆ.