ಇಮ್ರಾನ್ ಖಾನ್ ಸರ್ಕಾರದೊಡನೆ ಕದನವಿರಾಮ ಅಂತ್ಯ: ಪಾಕ್ ತಾಲಿಬಾನ್ ಘಟಕ ತೆಹ್ರೀಕ್ ಇ ತಾಲಿಬಾನ್ ಘೋಷಣೆ ಕದನವಿರಾಮ ಒಪ್ಪಂದ ಮುರಿದುಬೀಳಲು ಸಂಘಟನೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇರುವುದೇ ಕಾರಣ ಎನ್ನಲಾಗಿದೆ. ಪಾಕ್ ನಲ್ಲಿ ವಿಧ್ವಂಸಕ ಕೃತ್ಯ ಮುಂದುವರಿಸಲು ಉಗ್ರನಾಯಕ ಕರೆ. ಕರಾಚಿ: ತಾಲಿಬಾನ್ ಉಗ್ರಸಂಘಟನೆಯ ಪಾಕಿಸ್ತಾನ ಘಟಕ ತೆಹ್ರೀಕ್ ಇ ತಾಲಿಬಾನ್ ಪಾಕ್ ಸರ್ಕಾರದ ಜೊತೆ ಇದುವರೆಗೂ ಚಾಲ್ತಿಯಲ್ಲಿದ್ದ ಕದನವಿರಾಮಕ್ಕೆ ಅಂತ್ಯ ಹಾಡಲು ನಿರ್ಧರಿಸಿರುವುದಾಗಿ ಘೋಷಿಸಿದೆ. ಇದನ್ನೂ ಓದಿ: ಅಮೆರಿಕ ಮತ್ತು ಚೀನಾ ನಡುವಿನ ಸೇತುವಾಗಲು ಪಾಕ್ ಬಯಸುತ್ತದೆ: ಪ್ರಧಾನಿ ಇಮ್ರಾನ್ ಖಾನ್ದೇಶದಲ್ಲಿ ಶಾಂತಿ ಸ್ಥಾಪನೆ ಸಲುವಾಗಿ ಶ್ರಮಿಸುತ್ತಿರುವ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇದರಿಂದ ಹಿನ್ನಡೆ ಉಂಟಾಗಿದೆ. ಕಳೆದ 14 ವರ್ಷಗಳಲ್ಲಿ ಪಾಕ್ ನಲ್ಲಿ ನಡೆದ ಹಲವು ದಾಳಿ ಘಟನೆಗಳ ಹಿಂದೆ ತೆಹ್ರೀಕ್ ಇ ತಾಲಿಬಾನ್ ಕೈವಾಡ ಇರುವುದಾಗಿ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಪಾಕಿಸ್ತಾನಕ್ಕೆ 22,572 ಕೋಟಿ ರೂ. ಸಾಲ ನೀಡಿದ ಸೌದಿ ಅರೇಬಿಯಾ: ಪಾಕ್ ಆರ್ಥಿಕ ಸುಸ್ಥಿರತೆಗೆ ಸಹಾಯನವೆಂಬರ್ 1 ರಿಂದ ಪಾಕ್ ಸರ್ಕಾರ ಮತ್ತು ತೆಹ್ರೀಕ್ ಇ ತಾಲಿಬಾನ್ ನಡುವೆ ಕದನವಿರಾಮ ಏರ್ಪಟ್ಟಿತ್ತು. ಈ ಕದನವಿರಾಮ ಒಪ್ಪಂದ ಮುರಿದುಬೀಳಲು ಸಂಘಟನೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇರುವುದೇ ಕಾರಣ ಎನ್ನಲಾಗಿದೆ. ಪಾಕ್ ನಲ್ಲಿ ವಿಧ್ವಂಸಕ ಕೃತ್ಯ ಮುಂದುವರಿಸಲು ಉಗ್ರನಾಯಕ ಕರೆ ನೀಡಿರುವ ಧ್ವನಿಸುರುಳಿ ವೈರಲ್ ಆಗಿದೆ.ಇದನ್ನೂ ಓದಿ: ಮಾಹಿತಿ ಕದಿಯಲು ಭಾರತದ ಸರ್ಕಾರಿ ಕಂಪ್ಯೂಟರ್ ಗಳ ಮೇಲೆ ಪಾಕ್ ಹ್ಯಾಕರ್ ದಾಳಿ!